ಶೀಘ್ರವೇ ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸುತ್ತೇವೆ ಎಂದ ಎಂ.ಸಿ.ಸುಧಾಕರ್ 

Ravi Talawar
 ಶೀಘ್ರವೇ ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸುತ್ತೇವೆ ಎಂದ ಎಂ.ಸಿ.ಸುಧಾಕರ್ 
WhatsApp Group Join Now
Telegram Group Join Now

ಚಿಕ್ಕಬಳ್ಳಾಪುರ, ಜು.27: ‘ಸುಪ್ರಿಂಕೋರ್ಟ್ ಆದೇಶದನ್ವಯ ಶೀಘ್ರವೇ ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸುತ್ತೇವೆ ಎಂದು ಉನ್ನತ ಶಿಕ್ಷಣ ಖಾತೆ ಸಚಿವ ಡಾ. ಎಂ.ಸಿ.ಸುಧಾಕರ್  ಹೇಳಿದರು.

ನೀಟ್ ಪರೀಕ್ಷೆ ಹಾಗೂ ಫಲಿತಾಂಶ ಗೊಂದಲ ಹಿನ್ನಲೆ ರಾಜ್ಯದ ಸಿಇಟಿ ಮ್ಯಾಟ್ರಿಕ್ಸ್ ಮೇಲೆ ಕರಾಳ ಛಾಯೆ ಬೀರಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ‘ ಈಗಾಗಲೇ ಕಾಲೇಜು ಆಯ್ಕೆಗೆ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. 2024-25ರ ಶೈಕ್ಷಣಿಕ ಸಾಲಿಗೆ ಅನುಕೂಲವಾಗುವಂತೆ ಸೂಕ್ತ ಕ್ರಮ ಕೈಗೊಳ್ಳುತ್ತೆವೆ ಎಂದಿದ್ದಾರೆ.

ವಿವಾದಕ್ಕೆ ಸಿಲುಕಿರುವ ನೀಟ್ ಪರೀಕ್ಷೆಯ ಫಲಿತಾಂಶ ಶನಿವಾರ(ಜು.21) ಪ್ರಕಟಿಸಲಾಗಿತ್ತು. ಇನ್ನು 2024ರ ನೀಟ್- ಯುಜಿ (NEET-UG) ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಮರು ಪರೀಕ್ಷೆ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ(ಜು.23) ಹೇಳಿತ್ತು. ಎರಡು ಸ್ಥಳೀಯ ಪ್ರಶ್ನೆ ಪತ್ರಿಕೆಗಳ ಸೋರಿಕೆಗಳ ನಂತರ ಪರೀಕ್ಷೆಯ “ವ್ಯವಸ್ಥಿತ ಉಲ್ಲಂಘನೆ” ಅನ್ನು ಸೂಚಿಸುವ ಯಾವುದೇ ಡೇಟಾ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠವು ಮರು-ಪರೀಕ್ಷೆಯನ್ನು ನಡೆಸುವ ಆದೇಶವು 23.33 ಲಕ್ಷ ಮಹತ್ವಾಕಾಂಕ್ಷಿ ವೈದ್ಯಕೀಯ ವೃತ್ತಿಪರರ ಮೇಲೆ ದೊಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಹೇಳಿದ್ದರು.

WhatsApp Group Join Now
Telegram Group Join Now
Share This Article