ಧಾರವಾಡ: ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಧಾರವಾಡದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಧಾರವಾಡದ ಶಾಲ್ಮಲಾ ನದಿ ಉಗಮ ಸ್ಥಾನದ ಬಳಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಪೊರಕೆ ಹಿಡಿದು ಸ್ವತಃ ಕಸ ಗುಡಿಸುವುದರ ಮೂಲಕ ಸ್ವಚ್ಛತಾ ಅಭಿಯಾನಕ್ಕೆ ಕೈ ಜೋಡಿಸಿದರು.
ಶಾಲ್ಮಲಾ ನದಿ ಬಳಿಯ ಮೆಟ್ಟಿಲುಗಳ ಮೇಲಿದ್ದ ಕಸವನ್ನು ಗುಡಿಸಿ ಸ್ವತಃ ಕೇಂದ್ರ ಸಚಿವ ಜೋಶಿ ಅವರೇ ಕಸವನ್ನು ತುಂಬುವುದರ ಮೂಲಕ ಸ್ವಚ್ಛ ಭಾರತ ಆಂದೋಲನಕ್ಕೆ ಸಾಥ್ ನೀಡಿದರು. ಮೇಯರ್ ಜ್ಯೋತಿ ಪಾಟೀಲ, ಪಾಲಿಕೆಯ ಇತರ ಸದಸ್ಯರು ಕೂಡ ಸ್ವಚ್ಛ ಭಾರತ ಆಂದೋಲನದಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಜೋಶಿ, ಪ್ರಧಾನಿ ಮೋದಿ ಅವರು ವಾರದಲ್ಲಿ ಕೆಲ ಗಂಟೆಯಾದರೂ ಸ್ವಚ್ಚತಾ ಕಾರ್ಯ ಮಾಡಲು ಕರೆ ನೀಡಿದ್ದು, ಮಹಾನಗರ ಪಾಲಿಕೆ ಸದಸ್ಯರು, ಬಿಜೆಪಿ ಕಾರ್ಯಕರ್ತರು ಈ ಅಕ್ಟೋಬರ್ ತಿಂಗಳಲ್ಲಿ ಸತತ ಸ್ವಚ್ಚತಾ ಕಾರ್ಯ ಮಾಡಬೇಕು ಎಂದು ಕರೆ ನೀಡಿದರು.


