ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ವಾರ್ಷಿಕ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ

Ravi Talawar
 ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ವಾರ್ಷಿಕ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ
WhatsApp Group Join Now
Telegram Group Join Now
 ಧಾರವಾಡ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಧಾರವಾಡದ ವಾರ್ಷಿಕ ಸರ್ವಸಾಧಾರಣಾ ಸಭೆ ಹಾಗೂ ಪ್ರಸಕ್ತ ಸಾಲಿನ ಪ್ರತಿಭಾ ಪುರಸ್ಕಾರ ಸಮಾರಂಭವು ಅಕ್ಟೋಬರ್ 12 ರಂದು ಲಿಂಗಾಯತ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಅ.ಭಾ.ವಿ.ಲಿ.ಮ ಸಭಾ ಜಿಲ್ಲಾದ್ಯಕ್ಷ ಪ್ರದೀಪ್ ಪಾಟೀಲ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ. ಹಾನಗಲ್ ವಿರಕ್ತಮಠದ ಪರಮ ಪೂಜ್ಯ ಮಹಾತಪಸ್ವಿ ಶ್ರೀ ಕುಮಾರ ಶಿವಯೋಗಿ ಸ್ವಾಮೀಜಿಯವರು ಸಂಸ್ಥಾಪಿಸಿದ ಹಾಗೂ ಪ್ರಥಮ ಸಂಸ್ಥಾಪಕ ಅಧ್ಯಕ್ಷರಾದ ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿಯವರ ಮಾರ್ಗದರ್ಶನದಲ್ಲಿ ಸಮಾಜದ ಹಲವು  ಮಹನೀಯರ ತಪಸ್ಸಿನ ಫಲದಿಂದ ಮಹಾಸಭೆಯು ಅನೇಕ ಸಾಮಾಜಿಕ ಹಾಗೂ ಜನಪರ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಸಮಾಜದ ಅಭಿವೃದ್ಧಿ ಮಾಡುತ್ತಿದೆ ಎಂದರು.
ಸಮಾಜದ ಮಕ್ಕಳಿಗೆ ಇಷ್ಟಲಿಂಗ ಧಾರಣೆ,ಸಹಜ ಶಿವಯೋಗ ಧಾರ್ಮಿಕ ಆಚಾರ ವಿಚಾರ ಹಾಗೂ ಬಸವಾದಿ ಶರಣರ ವಚನ ಅಧ್ಯಯನ ಚಿಂತನ ಮಂಥನ ಮತ್ತು ಎಲ್ಲಾ ದಾರ್ಶನಿಕರ ಮಹಾತ್ಮರ ಸ್ಮರಣೋತ್ಸವ ನಡೆಸುವ ಮೂಲಕ ತಿಳುವಳಿಕೆ ನೀಡುತ್ತಿದೆ, ಯುವಜನರಿಗಾಗಿ, ವ್ಯಕ್ತಿತ್ವ ವಿಕಸನ, ಅನುಭಾವ, ಸಮಾಜ ಸಂಘಟನೆ ಮಾಡುತ್ತಿದೆ. ಮಹಿಳಾ ಘಟಕ ವತಿಯಿಂದ ವಿವಿಧ ಶರಣೆಯರ ಸ್ಮರಣೋತ್ಸವ ವಚನನೃತ್ಯ, ವಚನ ಗಾಯನ, ಸೇರಿದಂತೆ ಸ್ಪರ್ದೆಗಳನ್ನು ಆಯೋಜಿಸಿ ಬಹುಮಾನ ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿದೆ.
ಉನ್ನತ ವ್ಯಾಸಂಗಕ್ಕೆ ಆಗಮಿಸುವ ನಮ್ಮ ಸಮಾಜದ  ವಿದ್ಯಾರ್ಥಿಗಳಿಗೆ ವಸತಿ ನಿಲಯಕ್ಕೆ ಜಾಗಾ ಖರೀದಿಸುವ ಚರ್ಚೆ ನಡೆದಿದೆ ಎಂದರು.ದಿನಾಂಕ 12-10-25 ರ ರವಿವಾರ ದಂದು ಬೆಳಿಗ್ಗೆ 10-30 ಕ್ಕೆ ಜಿಲ್ಲಾ ಘಟಕದ ವಾರ್ಷಿಕ ಸರ್ವಸಾಧಾರಣಾ ಸಭೆ ಜರುಗುವುದು, ನಂತರ ಮಧ್ಯಾಹ್ನ 1-30 ಕ್ಕೆ  ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇಕಡಾ 90 ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗುವುದು, ಈ ಕಾರ್ಯಕ್ರಮದ ಉದ್ಘಾಟಕರಾಗಿ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಡಾ.ಈಶ್ವರ್ ಉಳ್ಳಾಗಡ್ಡಿ ಯವರು ಮತ್ತು ಮುಖ್ಯ ಅತಿಥಿಗಳಾಗಿ ಹು-ಧಾ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ರುದ್ರೇಶ್ ಎಸ್.ಘಾಳಿ ಯವರು ಅಧ್ಯಕ್ಷತೆಯನ್ನು ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಪ್ರದೀಪ ಎಂ.ಪಾಟೀಲ ರವರು ವಹಿಸುವರು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಶಿವಶರಣ ಕಲಬಶೆಟ್ಟರವಿ.ಸಿ ಸವಡಿ.ಚಂದ್ರಶೇಖರ ಮನಗುಂಡಿ.ಶಂಕರ ಕುಂಬಿ.ಡಾ ಪಾರ್ವತಿ ಹಾಲಭಾವಿ.ಮಡಿವಾಳಪ್ಪ ಶಿರಿಯಣ್ಣವರ.ಪ್ರಕಾಶ ಭಾವಿಕಟ್ಟಿ.ಡಾ ಸುವರ್ಣಾ ಬಿರಾದಾರ.ಎಸ ಎಸ ನಿಡವಣಿ.ಅರ್ ಎಸ್ ಉಪ್ಪಿನ.ಬಿ ಎಮ್ ಸೂರಗೊಂಡ.ಬಿ ಎಸ್ ಗೋಲಪ್ಪನವರ .ಆನಂದ ಗಡೇಕಾರ ಇದ್ದರು.
WhatsApp Group Join Now
Telegram Group Join Now
Share This Article