ಘಟಪ್ರಭಾ: ಪ್ರತಿ ವರ್ಷದಂತೆ ಈ ವರ್ಷವೂ ಮಲ್ಲಾಪುರ ಪಿ ಜಿ, ಘಟಪ್ರಭಾದ ಶ್ರೀ ವಿಠ್ಠಲ ರುಕ್ಮಿಣಿ ಮಂದಿರದಲ್ಲಿ ಶ್ರೀ ಜ್ಞಾನೇಶ್ವರಿ ಪಾರಾಯಣ ಸಪ್ತಾಹ ಕಾರ್ಯಕ್ರಮವು ಪೂಜೆ, ಅಭಿಷೇಕ, ಮಹಾಪ್ರಸಾದ ಇನ್ನು ಅನೇಕ ಭಕ್ತಿ ಭಾವದ ಭಜನೆ ಮುಖಾಂತರ ಗುರುವಾರ ದಿನಾಂಕ 14-08-2025 ರಂದು ಅದ್ದೂರಿಯಾಗಿ ಪ್ರಾರಂಭವಾಯಿತು. ಶ್ರೀ ನಾಮದೇವ ಮಹಾರಾಜ ವಾಸ್ತವ ಮಹಾರಾಜ ಅವರ ನೇತೃತ್ವದಲ್ಲಿ ಪಾರಾಯಣ ಪ್ರಾರಂಭವಾಯಿತು. ಈ ಪಾರಾಯಣದಲ್ಲಿ ಜಿ ಪಿ ರಾವ ಹೊಸಪೇಟೆ, ರಾಮಣ್ಣ ಹುಕ್ಕೇರಿ, ಸುರೇಶ ಪಾಟೀಲ, ಕುಮಾರ ಹುಕ್ಕೇರಿ, ಕಾಶಪ್ಪ ಹುಕ್ಕೇರಿ, ರಾಜು ಹುಕ್ಕೇರಿ, ಅಲ್ಲಪ್ಪಾ ಹುಕ್ಕೇರಿ, ಮಲ್ಲಪ್ಪ ಹುಕ್ಕೇರಿ, ಶ್ರೀಕಾಂತ ವಿ ಮಹಾಜನ, ಸುರೇಶ ಪಾಟೀಲ ಬಸವರಾಜ ಬೆಳ್ಳಣ್ಣವರ, ಆನಂದ ಬನನ್ನವರ, ಶಂಕರಗೌಡ ಪಾಟೀಲ, (ಬೆಳವಿ) ಸುಭಾಷ ಗಾಯಕವಾಡ, ಕಲ್ಲಪ್ರಾ ಕೊಂಕಣಿ, ಕೆಂಚಪ್ಪ ನಾಯಿಕ, ಪ್ರಭು ಅಂತರಗಂಗಿ, ಎಂ ಜಿ ಬಡೋದೆ, ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.