ಬೈಲಹೊಂಗಲ: ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಡಿ.16 ರಂದು ನಡೆಯುವ ಕರ್ನಾಟಕ ರಾಜ್ಯ ರೈತ ಸಂಘಗಳ ಏಕೀಕರಣ ಹೋರಾಟಕ್ಕೆ ಬೆಳಗಾವಿ ಜಿಲ್ಲೆಯ ಕೇಂದ್ರ ಮಾಜಿ ಮಂತ್ರಿ ರೈತ ಮುಖಂಡ ದಿ.ಬಾಬಾಗೌಡರು ಪಾಟೀಲ ಪ್ರತಿಷ್ಠಾನ ಹಾಗೂ ಅಭಿಮಾನಿಗಳು ಪಾಲ್ಗೊಳ್ಳಲು ನಿರ್ಧರಿಸಲಾಗಿದೆ ಎಂದು ಸಂಚಾಲಕರಾದ ಈಶಪ್ರಭು ಬಾಬಾಗೌಡ ಪಾಟೀಲ, ಶ್ರೀಕಾಂತ ಶಿರಹಟ್ಟಿ ತಿಳಿಸಿದ್ದಾರೆ.
ಬೈಲಹೊಂಗಲ ಪಟ್ಟಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ರವರು ಮಾತನಾಡಿ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು, ರೈತರು ಬೆಳೆದ ಬೆಳೆಗೆ ಧರ ನಿರ್ಧರಿಸಬೇಕು ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು ಹಾಗೂ ರೈತರಿಗೆ ಪ್ರತಿ ತಿಂಗಳ ಮಾಶಾಸನ ನೀಡಬೇಕು, ರೈತ ಸಮುಧಾಯಕ್ಕಾಗಿ ಹೋರಾಟ ಮಾಡಿ ಮಾಡಿದ ರೈತ ನಾಯಕರಾದ ಪ್ರೋಪೇಸರ್ ಶ್ರೀ ನಂಜುಂಡಸ್ವಾಮಿ ಹಾಗೂ ಬಾಬಾಗೌಡರು ಪಾಟೀಲ ರವರ ಪ್ರತಿಮೇಗಳನ್ನು ಬೆಳಗಾವಿಯ ಸುವರ್ಣಾಸೌಧದ ಮುಂದೆ ಹಾಗೂ ನರಗುಂದ ಮತ್ತು ನವಲಗುಂದದಲ್ಲಿ ಸ್ಥಾಪಿಸಬೇಕು ಹಾಗೂ ಬಾಬಾಗೌಡರ ಹೆಸರಿನಲ್ಲಿ ಉತ್ತರ ಕರ್ನಾಟಕದ ಬೆಳಗಾವಿ ಅಥವಾ ಧಾರವಾಡ ದಲ್ಲಿ ಕೃಷಿ ಅಧ್ಯಯನ ಪೀಠ ಸ್ಥಾಪಿಸಬೇಕು ವಿದ್ಯಾವಂತ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 5000/- ರೂಗಳ ಮಾಶಾಸನ ಕೋಡಬೇಕು ಹಾಗೂ ರೈತರ ಮಕ್ಕಳಿಗೆ ಕನ್ಯಾ ಕೊಡುವ ಯೋಜನೆ ಜಾರಿಗೆ ತರಬೇಕು.
ರಾಜ್ಯದ್ಯಂತ ಪ್ರತಿ ತಾಲೂಕ ಮಟ್ಟದಲ್ಲಿ ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕೃಷಿ (ವಕ್ಕಲುತನ ಉಳಿವಿಗಾಗಿ) ಜಾಗೃತಿ ಕಾರ್ಯಕ್ರಮಗಳಿಗೆ ಒತ್ತು ನೀಡಬೇಕು. ಕೃಷಿ ಬೆಲೆ ಆಯೋಗಕ್ಕೆ ಖಾಯಂ ಸಂಪೂರ್ಣವಾದ ಅಧಿಕಾರ ನೀಡಬೇಕು, ಅಧ್ಯಕ್ಷರನ್ನು ನೇಮಕ ಮಾಡಬೇಕು. ದೊಡ್ಡ, ಸಣ್ಣ (ಜಾತ್ಯಾತೀತವಾಗಿ) ಪರಿಗಣಿಸದೆ ನಾಡಿನ ಎಲ್ಲಾ ರೈತರಿಗೆ ಸರ್ಕಾರದ ಯೋಜನೆಗಳು ದೊರಕಬೇಕು. ರೈತರಿಗೆ ಬೀಜ ಗೊಬ್ಬರ, ಕೀಟನಾಶಕಗಳು ಸಮಪರ್ಕವಾಗಿ ಕಡಿಮೆ ದರದಲ್ಲಿ ದೊರಕಬೇಕು. ನಮ್ಮ ರೈತ ಬೆಳೆದ ಬೆಳಗೆ ವೈಜ್ಞಾನಿಕ ಬೆಲೆ ನಿರ್ಧರಿಸಬೇಕು, ಕೃಷಿ ಪಂಪಸೆಟ್ಟ್ ಗಳಿಗೆ ಪ್ರತಿ ದಿನಕ್ಕೆ ಕನಿಷ್ಠ 12 ಘಂಟೆಗಳ ಕಾಲ ನೀರಂತರ ವಿಧ್ಯುತ ಪೂರೈಸಬೇಕು.
ಮುಂದುವರೆದು ಸ್ಥಳೀಯ ಸರ್ಕಾರ (ಗ್ರಾಮ ಪಂಚಾಯತ) ಮಟ್ಟದಲ್ಲಿ ತಾಂತ್ರಿಕ ಲೋಪದೋಷಗಳನ್ನು ಸರಿಪಡಿಸಿ ದಿನಂ ಪ್ರತಿ ನಡೆಯುವ ಭ್ರಷ್ಟಾಚಾರಗಳನ್ನು ಕಡಿಮೆ ಮಾಡಿ ಸಾರ್ವಜನಿಕರ ನಿಗಧಿತ ಸಮಯದಲ್ಲಿ ಸೌಲಭ್ಯಗಳನ್ನು ಓದಗಿಸುವುದು.
ಕೇಂದ್ರ ಸರ್ಕಾರದ ರೈತರ ಹೊಲಗಳಿಗೆ ಹೋಗುವ ರಸ್ತೆ ಜಾರಿಗೆ ತಂದ ಅಂಧಿನ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಸಂಪುಟದ ಗ್ರಾಮೀಣಾಭಿವೃದ್ಧಿ ಮಂತ್ರಿ ರೈತ ನಾಯಕ ಬಾಬಾಗೌಡರ ಕನಸುಗಳು ರೈತರಿಗೆ ಗ್ರಾಮೀಣ ಪ್ರದೇಶಗಳಿಗೆ ಜಾರಿಗೆ ಬಂದಿದ್ದು ಗ್ರಾಮ ಸಡಕ್ ಯೋಜನೆಯ ಹೆಸರು ಬಾಬಾಗೌಡರ ಗ್ರಾಮ ಸಡಕ್ ಯೋಜನೆಯಂತಾ ರಾಜ್ಯ ಸರ್ಕಾರ ಮರುನಾಮಕರ ಮಾಡಲು ಕೇಂದ್ರಕ್ಕೆ ಶಿಪಾರಸ್ಸು ಮಾಡಬೇಕು. ಪ್ರತಿ ಕುಟುಂಬದಲ್ಲಿ ಶಿಕ್ಷಣಕ್ಕೆ ಅನುಗುಣವಾಗಿ ಒಬ್ಬರಿಗಾದರು ಕನಿಷ್ಠ 10 ವರ್ಷ ಸರ್ಕಾರಿ ನೌಕರಿ ಕೊಡಬೇಕು ಹಾಗೂ ಕನ್ಯಾ ಕೋಡುವ ಯೋಜನೆ ಜಾರಿಗೆ ತರಭೇಕು ಹಾಗೂ ಸಕ್ಕರೆ ಕಾರ್ಖಾನೆಗಳ ಪರವಾಣಿಗೆ ಕೊಡುವಾಗ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಹಾಗೂ ವೈಜ್ಞಾನಿಕ ಪರಿಶೀಲನೆಯನ್ನು ಮಾಡಿ ಕಾರ್ಖಾನೆಗಳಿಗೆ ಪರವಾಣಿಗೆ ನೀಡಬೇಕು ಎಂದು ತಿಳಿಸಿದರು.
ಸುದ್ಧಿ ಘೋಷ್ಠಿಯಲ್ಲಿ ಶಂಕರೆಪ್ಫ ಯಡಳ್ಳಿ, ಬಸನಗೌಡ ಭೀಮನಗೌಡರ, ಬಸವೇಶ ವೆಂಕಟಪ್ಪಣ್ಣವರ, ಮೊಹನ ವಕ್ಕುಂದ, ಮಾಹಂತೇಶ ಗುಂಡ್ಲೂರ, ಮಡಿವಾಳಪ್ಪ ನಾನಣ್ಣವರ, ಗುರಲಿಂಗಯ್ಯಾ ಕಿಲ್ಲೆದಾರ ಹಾಗೂ ಇತರರು ಹಾಜರಿದ್ದರು.