ಬಳ್ಳಾರಿ ಸೆ 06. ಕೃಷಿ ಇಲಾಖೆಯ ಪ್ರಭಾರ ಜಂಟಿ ಕೃಷಿ ನಿರ್ದೇಶಕರು ಆದಂತಹ ಎಸ್. ಎನ್. ಮಂಜುನಾಥ್ ಅವರು ಹಾಗೂ ಸಹಾಯಕ ಕೃಷಿ ನಿರ್ದೇಶಕರು ಆದಂತಹ ರಫಿಯುಲ್ಲ (ADA SMS) ಮತ್ತು Garjappa ಅವರು ಕೃಷಿ ವಿಜ್ಞಾನ ಕೇಂದ್ರ, ಹಗರಿ ವಿಜ್ಞಾನಿ ಗಳೊಂದಿಗೆ ರೂಪನಗುಡಿ ಹೋಬಳಿಯ ಗ್ರಾಮಗಳ ಹೊಲಗಳಿಗೆ ಭೇಟಿ ನೀಡಿ ರೈತರೊಂದಿಗೆ ತೊಗರಿ , ಭತ್ತ ಹಾಗೂ ಮೆಕ್ಕೆಜೋಳದಲ್ಲಿ ಬರುವ ಕೀಟ ಮತ್ತು ರೋಗ ನಿಯಂತ್ರಣಕ್ಕೆ ಸಲಹೆಗಳನ್ನು ನೀಡಿದರು. ತಾಲ್ಲೂಕಿನಲ್ಲಿ ಸತತ ವಾಗಿ ಮಳೆ ಬಂದಿದ್ದರಿಂದ ಭತ್ತದಲ್ಲಿ ಕಣೆನೊಣ ಇರುವುದೆಂಬ ಸಂದೇಹ ದಿಂದ ಪರಿಶೀಲಿಸಿದರು ಆದರೆ ಜಿಲ್ಲೆಯಲ್ಲಿ ಇದುವರೆಗೂ ಕಣೆನೊಣ ಕಂಡು ಬಂಧಿಸುವುದಿಲ್ಲ ಎಂದು ಪ್ರಭಾರ ಜಂಟಿ ಕೃಷಿ ನಿರ್ದೇಶಕರು ಆದಂತಹ ಎಸ್. ಎನ್. ಮಂಜುನಾಥ್ ಅವರು ತಿಳಿಸಿದರು.
Root grub (ಹೆಂಡೆ ಹುಳ) ಕ್ಕೆ Chloropyriphos 50EC ಅಥವಾ metharhizium ಬಳಸಬಹುದು ಮತ್ತು ಮೆಕ್ಕೆಜೋಳದಲ್ಲಿ ಬರುವ fallarmy worm ನ ತಡೆಗಟ್ಟಲು ಮೊದಲನೇ ಹಂತದಲ್ಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಜ್ಞಾನಿಗಳು ರೈತರಿಗೆ ತಿಳಿಸಿದರು. ಸಹಾಯಕ ಕೃಷಿ ನಿರ್ದೇಶಕರು Garjappa, ಪ್ರಭಾರಿ ಕೃಷಿ ಅಧಿಕಾರಿ ಗಾಯತ್ರಿ ಮತ್ತು ರೈತರು ಇದ್ದರು.