ಹುಕ್ಕೇರಿ.ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸಿದ ಪುಣ್ಯ ಜೋತೆಗೆ ಧನ್ಯತಾ ಭಾವನೆ ಮೂಡುವದು ಎಂದು ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಪನನವಕತ್ತಿ ಹೇಳಿದರು.
ಹುಕ್ಕೇರಿ ನಗರದ ಸಂತ ನಿರಂಕಾರಿ ಸತ್ಸಂಗ ಮಂಡಳ ವತಿಯಿಂದ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಬಿರವನ್ನು ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಪವನ ಕತ್ತಿ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.
ನಿರಂಕಾರಿ ಸತ್ಸಂಗ ಮಂಡಳಿ ವತಿಯಿಂದ ಚಂದ್ರಶೇಖರ ಗಂಗಣ್ಣವರ ಮತ್ತು ಸಿದ್ದೇಶ್ ಬೆನಾಡಿಕರ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು.
ಹುಕ್ಕೇರಿ ಸೆಕ್ಟರ್ ಸಂತ ನಿರಂಕಾರಿ ಮಂಡಳಿ ಜ್ಞಾನ ಪ್ರಚಾರಕ ಮುಖಿ ಮಾರುತಿ ಮೋರೆ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಸದ್ಗುರು ಮಾತಾ ಸುದಿಕ್ಷಾ ಹರದೇವಜಿ ಮಹಾರಾಜರ ಕೃಪೆಯಿಂದ ಮಾನವ ಏಕತಾ ದಿವಸ ಅಂಗವಾಗಿ ಭಾರತ ದೇಶದಲ್ಲಿ ಇಂದು ರಕ್ತದಾನ ಶಿಬಿರಗಳು ಜರಗುತ್ತಿವೆ,ಅದೆ ರೀತಿ ಇಂದು ಹುಕ್ಕೇರಿ ಶಾಖೆಯಲ್ಲಿ ಸುನಿಲ್ ಕುಮಾರ ರಾತ್ರಾಜಿ ಯವರ ಆದೇಶದ ಅನುಸಾರ ವಿವಿಧ ಶಾಖೆಗಳ ಸದ್ಬಕ್ತರು ಬಂದು ರಕ್ತದಾನ ಮಾಡುತ್ತಿದ್ದಾರೆ, ಒಬ್ಬರು ರಕ್ತ ದಾನ ಮಾಡುವದರಿಂದ ನಾಲ್ಕು ಜನರ ಜೀವ ಉಳಿಸ ಬಹುದು ಎಂದರು.
ವೇದಿಕೆ ಮೇಲೆ ಡಾ, ಡಿ ಎನ್ ಮಿಸಾಳೆ, ವಿಕಾಸ ಕಲಘಟಗಿ, ಎಸ್ ಎನರ ಮೂಲಿಮನಿ, ಎಸ್ ವಿ ವಿರಾಗಿ,ಡಿ ಎಮ್ ಗುರವ, ಸಂಜಯ ಕುಸ್ತಿಗಾರ ಉಪಸ್ಥಿತರಿದ್ದರು.
ಪವನ ಕತ್ತಿ ಮಾತನಾಡಿ ರಕ್ತದಾನ ಮಹಾ ದಾನವಾಗಿದೆ ಒಬ್ಬರು ನಿಡುವ ರಕ್ತ ಇನ್ನೊಬ್ಬರ ಜೀವ ಉಳಿಸಿದ ಪುಣ್ಯರ್ದಂದಿಗೆ ಧನ್ಯತಾ ಭಾವನೆ ಮೂಡುವದು ಇದಕ್ಕಾಗಿ ಸಂತ ನಿರಂಕಾರಿ ಮಂಡಳಿ ಸಂಸ್ಥೆ ಮನುಷ್ಯನ ರಕ್ತ ದೇಹದಲ್ಲಿ ಹರಿಯ ಬೇಕೆ ಹೋರತು ನಾಲೆಗಳಲ್ಲಿ ಅಲ್ಲ ಎಂಬ ಘೋಷನೆಯೊಂದಿಗೆ ದೇಶದಲ್ಲಿ ಪ್ರತವರ್ಷ ರಕ್ತದಾನ ಶಿಬಿರ ಹಮ್ಮಿಕೊಂಡು ಇನ್ನೊಬ್ಬರ ಜೀವ ಕಾಪಾಡುವ ಕಾರ್ಯ ಮಾಡುತ್ತಿದೆ ಈ ಸಂಸ್ಥೆ ಯ ಕಾರ್ಯ ಶ್ಲಾಘನೀಯ ವಾಗಿದ್ದು ಎಂದರು.
ನಂತರ ಬೆಳಗಾವಿ ಕೆ ಎಲ್ ಇ ಆಸ್ಪತ್ರೆ , ಗಡಿಂಗ್ಲಜ ರೆಡ್ ಕ್ರಾಸ್ ಸಂಸ್ಥೆ ಮತ್ತು ಲಯನ್ಸ ಕ್ಲಬ್ ಸಹಯೋಗ ನೂರಾರು ಯುವಕ ಯುವತಿಯರ ರಕ್ತ ಸಂಗ್ರಹಿಸಲಾಯಿತು.
ಡಾ, ಗುರವ ಮತ್ತು ಮಿಸಾಳೆ ಯವರು ರಕ್ತದಾನ ಮತ್ತು ಅದರ ಪ್ರಯೋಜನೆ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಕಳೆದ ಏಳು ದಿನದಿಂದ ವಿವಿಧ ನಗರಗಳಲ್ಲಿ ರಕ್ತದಾನ ಶಿಬಿರ ಕುರಿತು ಜಾಗ್ರತಾ ಜಾಥ ಹಮ್ಮಿಕೋಳ್ಳಲಾಗಿತ್ತು. ಈ ಸಂದರ್ಭದಲ್ಲಿ ಬಿ ಎನ್ ಕೋಳೆಕರ, ಸಿದ್ದೇಶ ಬೆನಾಡಿಕರ, ಭರಮಣ್ಣಾ ಜಾಧವ, ಚಂದು ಗಂಗಣ್ಣವರ, ಅಶೋಕ ಕಲಾಜ, ಕೆಂಪಣ್ಣಾ ಅಂಬಲೆ, ರಮೇಶ ಭೋವಿ,ಸಂಜಿವ ತಿಬಲೆ, ಕಲಗೌಡ ಪಾಟೀಲ, ಬಸವರಾಜ ಸದ್ರೆ, ಸಂದೀಪ ಸೂರ್ಯವಂಶಿ, ರಾಜು ಕೋಷ್ಟಿ, ರವಿ ಕದಮ, ಸುನಿತಾ ಮೋರೆ, ಸುವರ್ಣಾ ಅಂಬಲೆ, ಸುಧಾ ಕಲಾಜ, ಸ್ವಪ್ನಾ ಮತ್ತು ಸವಿತಾ ಬೆನಾಡಿಕರ, ಲಕ್ಷ್ಮಿ ಜಾಧವ ಮೊದಲಾದವರು ಉಪಸ್ಥಿತರಿದ್ದರು.