ಲಿಂಗಾಯತ ಮಹಿಳಾ ಸಮಾಜದದಿಂದ ʻಗುರು ಕಾರುಣ್ಯʼ ನಿಮಿತ್ಯ ಗುರುವಂದನಾ ಕಾರ್ಯಕ್ರಮ
ಬೆಳಗಾವಿ: ಪ್ರತಿಯೊಬ್ಬ ವ್ಯಕ್ತಿ ಗುರುವಿನ ಮಾರ್ಗದಲ್ಲಿ ನಡೆದರೆ ಶಾಶ್ವತ ಸುಖ ಲಭಿಸಲು ಸಾಧ್ಯ. ಜೀವನದ ಯಶಸ್ಸಿಗೆ ಗುರುವಿನ ಮಾರ್ಗದರ್ಶನ ಅಗತ್ಯ ಎಂದು ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಇಲ್ಲಿನ ಕನ್ನಡ ಭವನದಲ್ಲಿ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಆಯೋಜಿಸಲಾದ “ಗುರು ಕಾರುಣ್ಯ” ನಿಮಿತ್ಯವಾಗಿ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ , ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.
ಜೀವನದಲ್ಲಿ ಯಶಸ್ಸು ಸಾಧಿಸಲು ಗುರು ಮತ್ತು ಗುರಿ ಬೇಕು. ಪ್ರತಿ ಹೆಜ್ಜೆಯಲ್ಲೂ ಗುರುವಿನ ಮಾರ್ಗದರ್ಶನ ಅಗತ್ಯವಿದೆ. ‘ಗು’ ಎಂದರೆ ಅಂಧಕಾರ, ‘ರು’ ಎಂದರೆ ಅದನ್ನು ನಿರೋಧಿಸುವ ಶಕ್ತಿ, ಅಂಧಕಾರವನ್ನು ನಿರೋಧಿಸುವ ಶಕ್ತಿಯನ್ನೇ ‘ಗುರು’ ಎನ್ನಲಾಗುತ್ತದೆ. ಇಲ್ಲಿ ಗುರುವೆಂದರೆ ಯಾವುದೋ ವ್ಯಕ್ತಿಯೆಂದೋ ಪರಂಪರೆಯೆಂದೋ ಸೂಚಿಸಿಲ್ಲ ಎಂದು ಶ್ರೀಗಳು ಹೇಳಿದರು.
ಗುರು ಶಿಷ್ಯ ಪರಂಪರೆಯು ಕಲಿಕೆಗೆ ಸಮಗ್ರ ವಿಧಾನವನ್ನು ಕಲಿಸುತ್ತದೆ. .ಜ್ಞಾನವು ಪಠ್ಯಪುಸ್ತಕಗಳಿಗೆ ಸೀಮಿತವಾಗಿರಲಿಲ್ಲ, ಅದು ಜೀವನದ ವಿವಿಧ ಅಂಶಗಳನ್ನು ಒಳಗೊಂಡಿರುತ್ತದೆ. ಗುರು-ಶಿಷ್ಯ ಪರಂಪರೆಯು ನಿರ್ದಿಷ್ಟ ವಿಭಾಗಗಳನ್ನು ಮೀರಿದೆ. ಇದನ್ನು ಸಂಗೀತ, ನೃತ್ಯ, ಸಮರ ಕಲೆಗಳು, ಯೋಗ ಮತ್ತು ಸಾಂಪ್ರದಾಯಿಕ ಔಷಧದಂತಹ ವಿವಿಧ ಕ್ಷೇತ್ರಗಳಲ್ಲಿ ಕಾಣಬಹುದು. ಕಲಿಕೆಯ ವಿಷಯವು ಭಿನ್ನವಾಗಿದ್ದರೂ, ಸಮರ್ಪಣೆ, ಗೌರವ ಮತ್ತು ವೈಯಕ್ತಿಕ ಮಾರ್ಗದರ್ಶನದ ಮೂಲ ತತ್ವಗಳು ಸ್ಥಿರವಾಗಿರುತ್ತವೆ ಎಂದು ಶ್ರೀಗಳು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ಆಗುವುದು ಬಹಳ ಅಪರೂಪ. ಗುರುಗಳನ್ನು ನೆನಪಿಸಿಕೊಂಡು ಅವರಿಗೆ ವಂದನೆ ಮತ್ತು ಕೃತಜ್ಞತೆಗಳನ್ನು ಅರ್ಪಿಸುವುದು ನಮ್ಮ ಕರ್ತವ್ಯವಾಗಿದೆ. ಮುಂದಿನ ಯುವ ಪೀಳಿಗೆಗೆ ಗುರುವಿನ ಮಾರ್ಗದರ್ಶನ ಅವಶ್ಯಕತೆ ಇದೆ. ನಾವೆಲ್ಲರೂ ನಡೆದ ದಾರಿಯಲ್ಲಿ ಯುವ ಪೀಳಿಗೆ ಸಾಗಲಿದೆ ಎಂದು ಹೇಳಿದರು.
ವೇಳೆ ಶ್ರೀ ರಾಮಕೃಷ್ಣ ಮರಾಠೆ ರಚಿಸಿದ ಶ್ರೀ ಶೀರಿಷ್ ಜೋಶಿ ಅವರು ನಿರ್ದೇಶಿಸಿದ ನಾಟಕ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ನಾಟಕವನ್ನು ಪ್ರದರ್ಶಿಸಲಾಯಿತು. ಸಹಸ್ರಾರು ಜನರು ನಾಟಕ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಬೆಳ್ಳಿಚುಕ್ಕಿ ಸಂಗೀತ ಸಂಸ್ಥೆಯ ಸಹೋದರಿಯರು ರಾಜೇಶ್ವರಿ ಹಿರೇಮಠ ನೇತೃತ್ವದಲ್ಲಿ ಪುಟ್ಟರಾಜ ಗವಾಯಿ ಅವರ ಹಾಡುಗಳನ್ನು ಪ್ರಸ್ತುತಪಡಿಸಿದರು.
ಮುಖ್ಯ ಅತಿಥಿಗಳಾಗಿ ಶಿವಪ್ರಸಾದ ಹಿರೇಮಠ್ ಆಗಮಿಸಿದ್ದರು. ಮಧುಮತಿ ಹಿರೇಮಠ ಅವರು ಅಧ್ಯಕ್ಷತೆ ವಹಿಸಿದ್ದರು . ಸರೋಜಾ ನಿಶಾನ್ದಾರ್, ಸರೋಜಾ ನಿಶಾನದಾರ್ ಶರಣು ಸರ್ಮಪಿಸಿದರು. ರಕ್ಷಾ ದೇಗಿನಹಾಳ್ ಕಾರ್ಯಕ್ರಮ ನಿರೂಪಿಸಿದರು. ವಂದಿಸಿದರು. ಲಿಂಗಾಯತ ಮಹಿಳಾ ಸಮಾಜದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.