ನೇಸರಗಿ: ಶ್ರೀ ಗಣೇಶ ಹಬ್ಬದ ಪ್ರಯುಕ್ತ ಶ್ರೀ ಸಾರ್ವಜನಿಕ ಗಜಾನನ ಕಮೀಟಿ,ನೇಸರಗಿ ಹಾಗೂ ಗೆಳೆಯರ ಬಳಗ ನೇಸರಗಿ ಇವರ ಸಹಯೋಗದಲ್ಲಿ ಮಂಗಳವಾರ ದಿನಾಂಕ 02/09/2025 ರಂದು ಸಾಯಂಕಾಲ 6 ಗಂಟೆಗೆ *ರಸಪ್ರಶ್ನೆ ಕಾರ್ಯಕ್ರಮ* ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಸ್ಪರ್ಧಾಳುಗಳು ತಮ್ಮ ತಮ್ಮ ಶಿಕ್ಷಣ ಸಂಸ್ಥೆಗಳಿಂದ ಹೆಸರುಗಳನ್ನು ನೊಂದಾಯಿಸಿರುತ್ತಾರೆ. ವಿಜೇತರಿಗೆ ಕೊಡಮಾಡುವ ನೆನಪಿನ ಕಾಣಿಕೆಗಳನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವೀರಭದ್ರ ಬ ಚೋಬಾರಿಯವರು ವಿತರಣೆ ಮಾಡಲಿದ್ದಾರೆ. ಪ್ರಶಸ್ತಿ ಪತ್ರಗಳನ್ನು ಮಹಾಂತೇಶ ವೀ ಕಟ್ಟಿಮನಿಯವರು ನೀಡಲಿದ್ದಾರೆ. ನೋಟ್ ಬುಕ್ ಮತ್ತು ಪೆನ್ನು ಗಳನ್ನು ಭಾಗ್ಯವಂತಿ ಬುಕ್ ಸ್ಟಾಲ ನ ಮಾಲಿಕರಾದ ಅಡಿವೆಪ್ಪ ಕರವೀರನವರ ಹಾಗೂ ಪ್ರೇರಣಾದಾಯಕ ಪುಸ್ತಕಗಳನ್ನು ಮಹಮ್ಮದ್ ( ಪಪ್ಪು) ನದಾಫ – ಇವರುಗಳು ನೀಡಿರುತ್ತಾರೆ. ಗುರುಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಸಕಾಲಕ್ಕೆ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂಬುದು ಸಂಘಟಕರು ತಿಳಿಸಿದ್ದಾರೆ.