ಭಾರತ ಸಂಕಲ್ಪ ಸಭೆ ಮತ್ತು ತುರ್ತು ಪರಿಸ್ಥಿತಿ ಕರಾಳ ದಿನಗಳ ಹೋರಾಟದ 50ನೇ ವರ್ಷದ ಅನಾವರಣ 

Ravi Talawar
 ಭಾರತ ಸಂಕಲ್ಪ ಸಭೆ ಮತ್ತು ತುರ್ತು ಪರಿಸ್ಥಿತಿ ಕರಾಳ ದಿನಗಳ ಹೋರಾಟದ 50ನೇ ವರ್ಷದ ಅನಾವರಣ 
WhatsApp Group Join Now
Telegram Group Join Now
ಧಾರವಾಡ:  ಭಾರತ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಇಂದಿರಾ ಗಾಂಧಿಗೆ ಪ್ರಜಾಪ್ರಭುತ್ವವಾದಿ ಎನ್ನುಲು ಬರವುದಿಲ್ಲ, ಇಂದಿರಾಗಾಂಧಿಗೆ ಹಿಟ್ಲರ್ ಎಂದರೇ ಕೆಸ್ ಹಾಕುವ ಕಾಂಗ್ರೆಸ್ಸಿಗರು ಇಂದಿರಾ ಗಾಂಧಿಯವರನ್ನು ಬೇರೆ ಏನು ಕರೆಯಬೇಕು ಎಂಬುದನ್ನು ಹೇಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಭಾರತೀಯ ಜನತಾ ಪಕ್ಷ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಘಟಕದಿಂದ ಭಾನುವಾರ ಆಯೋಜಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರಕ್ಕೆ ೧೧ ವರ್ಷ ವಿಕಸಿತ ಭಾರತ ಸಂಕಲ್ಪ ಸಭೆ ಮತ್ತು ತುರ್ತು ಪರಿಸ್ಥಿತಿ ಕರಾಳ ದಿನಗಳ ಹೋರಾಟದ ೫೦ನೇ ವರ್ಷದ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ೫೦ ವರ್ಷದ ಹಿಂದಿನ ಇಂದಿರಾ ಗಾಂಧಿ ಆಡಳಿತ ಅರಾಜಕತೆ ಇತಿಹಾಸ ಜನರು ತಿಳಿಯುವ ಅವಶ್ಯಕತೆ ಇದೆ. ಸಂವಿಧಾನದ ಆಶಯಗಳನ್ನು ಮೂಲೆಗುಂಪು ಮಾಡಿ ಸರ್ವಾಧಿಕಾರಿ ಧೋರಣೆ ತಾಳಿ ಜನರ ಸ್ವಾತಂತ್ರ್ಯವನ್ನು ಕಸಿದುಕೊಂಡರು. ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದುಕೊಂಡರು. ರಾಜ್ಯಸಭಾ ಸದಸ್ಯರನ್ನು ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕ ಮಾಡಿರುವುದು ಕಾಂಗ್ರೆಸ್ ಅಧಿನಾಯಕಿ ಇಂದಿರಾ ಗಾಂಧಿ ಇತಿಹಾಸದಲ್ಲಿದೆ ಎಂದು ತಿಳಿಸಿದರು.
೧೯೭೫ರಲ್ಲಿ ಇಡೀ ದೇಶದ ಜನರ ಬಾಯಿ ಮುಚ್ಚಿಸಿದ್ದ ತುರ್ತು ಪರಿಸ್ಥಿತಿಗೆ ಈಗ ೫೦ನೇ ವರ್ಷ. ಆಗ ಇದರ ವಿರುದ್ಧ ಹೋರಾಡಿ ಮಹನೀಯರು ತಾವು ನಡೆಸಿದ ಹೋರಾಟ, ಅನುಭವಿಸಿದ ನೋವು, ಜೈಲುವಾಸ, ಸಂಕಷ್ಟಗಳನ್ನು ಹೇಳಿದ್ದಾರೆ. ಹೋರಾಟ ಹತ್ತಿಕ್ಕಲು ನಡೆದ ಪ್ರಯತ್ನ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನಿಸುವ ಕೆಲಸ ಇಂದಿರಾಗಾಂಧಿಯವರ ಇತಿಹಾಸದಲ್ಲಿದೆ. ದೇಶದಲ್ಲಿ ಸ್ವಾತಂತ್ರ‍್ಯಾನಂತರ ಆಗಿರುವ ಜಡ್ಜಮೆಂಟ್ ಎಲ್ಲವೂ ದಾಖಲಾಗಿದೆ. ಆದರೆ ಇಂದಿರಾಗಾಂಧ ವಿರುದ್ಧ ಆಗಿರುವ ಜಡ್ಜಮೆಂಟ್ ದಾಖಲಾತಿಯಿಂದ ತೆಗೆದು ಹಾಕುವ ಕೆಲಸ ಕಾಂಗ್ರೆಸ್ ಮಾಡಿದೆ ಎಂದು ತಿಳಿಸಿದರು.
ಅಲಹಬಾದ್ ಹೈಕೋರ್ಟ್ ೧೯೭೫ ಜೂನ್ ೧೨ ರಂದು ಐತಿಹಾಸಿಕ ತೀರ್ಪು ನೀಡಿ ಇಂದಿರಾ ಗಾಂಧಿ ಸಂಸದ ಸ್ಥಾನವನ್ನು ರದ್ದು ಮಾಡಿತ್ತು. ಅಲ್ಲದೆ ಆರು ವರ್ಷಗಳ ಕಾಲ ಚುನಾವಣೆ ಸ್ಪರ್ಧೆಗೆ ನಿಷೇಧ ಹೇರಿತ್ತು. ಅಧಿಕಾರ ಉಳಿಸಿಕೊಳ್ಳಲು ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದರು. ವಾಕ್ ಸ್ವಾತಂತ್ರ‍್ಯ, ಪತ್ರಿಕಾ ಸ್ವಾತಂತ್ರ‍್ಯ ಹಾಗೂ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡರು. ಸ್ವಾತಂತ್ರ‍್ಯದ ಪ್ರಶ್ನೆ ಮಾಡಿದವರನ್ನು ನಿರ್ಧಾಕ್ಷಿಣ್ಯವಾಗಿ ಜೈಲಿಗೆ ನೂಕಲಾಯಿತು.
ದೇಶದ ಸಂವಿಧಾನವನ್ನು ಪ್ರಧಾನಿ ನರೇಂದ್ರ ಮೋದಿ ಸರಕಾರ ಬದಲಾವಣೆ ಮಾಡುತ್ತದೆ ಎಂದು ಅಪಪ್ರಚಾರ ಮಾಡುವ ಕಾಂಗ್ರೇಸ್ ಮೊದಲು ತಿಳಿದುಕೊಳ್ಳಬೇಕು. ಭಾರತ ದೇಶದ ಪ್ರತಿಯೊಬ್ಬ ಪ್ರಜೆಯ ರಕ್ತದಲ್ಲಿ ಪ್ರಜಾಪ್ರಭುತ್ವದ ಜಾತ್ಯತೀತ ತತ್ವ ಇದೆ ಎಂದು. ನಾವು ಅಧಿಕಾರದಲ್ಲಿ ಇರುವವರೆಗೆ ಮೀಸಲಾತಿ ತೆಗೆಯುವುದಿಲ್ಲ, ಸಂವಿಧಾನ ಬದಲಾವಣೆ ವಿಷಯವನ್ನು ಪ್ರಸ್ತಾಪಿಸುವ ಕಾಂಗ್ರೇಸ್ ಗೆ ತುರ್ತು ಪರಿಸ್ಥಿತಿ ೫೦ ನೆನಪಿಸುವ ಅವಶ್ಯಕತೆ ಇದೆ ಎಂದರು.
ದೇಶದಲ್ಲಿ ಪ್ರಸ್ತುತವಾಗಿ ಸ್ಥಿರ, ಸುಭದ್ರ ಸರಕಾರವಿದೆ. ಸರಿಯಾದ ನಾಯಕತ್ವವನ್ನು ಹೊಂದಿದೆ. ಇದು ಅಭಿವೃದ್ಧಿಗೆ ಪೂರಕವಾಗಿದೆ. ರಸ್ತೆ, ರೈಲು, ಸ್ವಚ್ಛತೆಯಲ್ಲಿ, ಭಯೋತ್ಪಾದನೆ ನಿಗ್ರಹಿಸಲು ಮೋದಿ ಸರ್ಕಾರ ಉತ್ತಮ ನಿರ್ಧಾರ ಕೈಗೊಂಡಿದೆ. ದೇಶವನ್ನು ಬಲಿಷ್ಟ ರಾಷ್ಟçಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವ ತೆಗೆದುಕೊಂಡು ಹೋಗಿದೆ. ದೇಶದಲ್ಲಿ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ನಾವು ನುಗ್ಗಿ ಹೊಡೆದಾಗ ಯುದ್ಧ ಪರಿಹಾರವಲ್ಲ ಎಂದು ಕಾಂಗ್ರೆಸ್ ಹೇಳುತ್ತದೆ. ಸರ್ಜಿಕಲ್ ಸ್ಟ್ರೈಕ್ ಪ್ರೂಫ್ ಕೇಳಿದ ಕಾಂಗ್ರೆಸ್ಸಿಗರು ನಮ್ಮ ಸೇನೆ ಪ್ರಬಲವಾಗಿದೆ. ಭೂದಳ, ವಾಯು ದಳ, ನೌಕಾದಳ ಸಂಘಟಿತವಾಗಿದೆ ಎಂಬುದನ್ನು ಮೊದಲು ತಿಳಿದುಕೊಳಬೇಕು. ದೇಶದಲ್ಲಿ ಡ್ರೋನ್ ಹಾಗೂ ಆಂಟಿ ಮಿಸೇಲ್ ಸಿಸ್ಟಮ್ ದೇಶದ ಸೇನೆಯ ಬಲವನ್ನು ಹೆಚ್ಚಿಸಿದೆ ಎಂದು ತಿಳಿಸಿದರು.
ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಮಾತನಾಡಿ, ಭಾರತ ದೇಶದ ಸ್ವಾತಂತ್ರ‍್ಯ ಪೂರ್ವದಲ್ಲಿ ದೇಶದಲ್ಲಿ ಯಾರು ಗುಲಾಮಗಿರಿ ಅನುಭವಿಸಬಾರದು ಎಂದು ನಮ್ಮ ದೇಶದ ಮಹಾನ್ ನಾಯಕರು ಸಂವಿಧಾನ ರಚಿಸಿದ್ದಾರೆ. ಎಲ್ಲರ ಅಭಿಪ್ರಾಯ ಪಡೆದು ಬಾಬು ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸುದೀರ್ಘ ಚರ್ಚೆಯ ನಂತರ ಡಾ.ಬಿ.ಆರ್ ಅಂಬೇಡ್ಕರ್ ಅವರ ಸಂವಿಧಾನ ಅಸ್ತಿತ್ವಕ್ಕೆ ದೇಶದಲ್ಲಿ ಬಂತು. ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಅಧಿನಾಯಕಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿ ದೇಶದ ಸಂವಿಧಾನದಲ್ಲಿ ತಿದ್ದುಪಡಿ ಮಾಡಿದರು. ದೇಶದ ಆಂತರಿಕ ಸುರಕ್ಷತೆ ಹಾಗೂ ಬಾಹ್ಯ ಸುರಕ್ಷತೆ ಬಳಸುವ ಕಾನೂನು ತುರ್ತುಪರಿಸ್ಥಿತಿಯನ್ನು ಹೇರಿ ಘಟಾನುಘಟಿ ನಾಯಕರನ್ನು ಜೈಲಿಗೆ ಕಳುಹಿಸುವ ಮೂಲಕ ಅರಾಜಕತೆ ಸೃಷ್ಟಿಸಿದರು. ಸ್ವಾತಂತ್ರ‍್ಯ ರಹಿತವಾಗಿ ಜನರು ಬದುಕುವ ಸ್ಥಿತಿಯನ್ನು ದೇಶದಲ್ಲಿ ತರಲಾಯಿತು ಎಂದು ತಿಳಿಸಿದರು.
ನಿವೃತ್ತ ಜಿಲ್ಲಾ ನ್ಯಾಯಾದೀಶ ಎಚ್.ಎಸ್ ಮೀಟಲಕೋಡ ಮಾತನಾಡಿ, ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ, ತುರ್ತು ಪರಿಸ್ಥಿಯ ಕರಾಳ ದಿನಗಳನ್ನು ದೇಶದಲ್ಲಿ ಹೇರಿರುವ ಸಂದರ್ಭಗಳು ವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದು, ದೇಶದಲ್ಲಿ ಸಂವಿಧಾನದ ಆಶಯಗಳು ಜೀವಂತವಾಗಿರಬೇಕು. ದೇಶಕ್ಕೆ ಸುಭದ್ರ ಸರಕಾರ, ಸ್ಥಿರ ನಾಯಕತ್ವ ಇದ್ದಾಗ ದೇಶದ ಪ್ರಗತಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ವಾಸ ಅನುಭವಿಸಿದ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಮಹಾನಗರ ಪಾಲಿಕೆ ಮಹಾಪೌರರಾದ ಜ್ಯೋತಿ ಪಾಟೀಲ, ಮಾಜಿ ಶಾಸಕ ಅಮೃತ ದೇಸಾಯಿ, ಮಾಜಿ ಶಾಸಕಿ ಸೀಮಾ ಮಸೂತಿ, ವಿಜಯಾನಂದ ಶೆಟ್ಟಿ, ರಾಜು ಕೋಟೆನಣ್ಣವರ, ಶಂಕರ ಕುಂಬಿ, ಸಂಜಯ ಕಪಟಕರ್, ಲಕ್ಷ್ಮಣ್ ಉಪ್ಪಾರ, ಶಂಕರ ಶಳಕೆ ಸೇರಿದಂತೆ ಇತರರಿದ್ದರು.
WhatsApp Group Join Now
Telegram Group Join Now
Share This Article