ಬೆಳೇ ಪರಿಹಾರ ನೀಡದೆ ರೈತರ ಜೀವಕ್ಕೆ ಕುತ್ತು : ಸಂಜಯ ಪಾಟೀಲ 

Ravi Talawar
ಬೆಳೇ ಪರಿಹಾರ ನೀಡದೆ ರೈತರ ಜೀವಕ್ಕೆ ಕುತ್ತು : ಸಂಜಯ ಪಾಟೀಲ 
WhatsApp Group Join Now
Telegram Group Join Now
ಬೆಳಗಾವಿ: ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಸುರಿದ ಬಾರಿ ಮಳೆಗೆ ಜಿಲ್ಲೆಯಾಧ್ಯಂತ ರೈತರ ಬೆಳೆ  ಸಂಪೂರ್ಣ ಹಾಳಾಗಿದ್ದು ಸರ್ಕಾರ ಬೆಳೆ ಪರಿಹಾರ ನೀಡದೆ ಬೆಲೆ ಏರಿಕೆಯಲ್ಲಿ ನಿರತವಾಗಿ ರೈತರ ಜೀವಕ್ಕೆ ಕುತ್ತು ತಂದಿದ್ದಾರೆ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಸರ್ಕಾರದ ವಿರುದ್ದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
    ತಾಲೂಕಿನ‌ ಮುತಗಾ ಮತ್ತು ಮಾರಿಹಾಳ ಗ್ರಾಮದ ಬೆಳೆ ಹಾನಿಯಾದ ರೈತರ ಜಮೀನುಗಳಿಗೆ ಶನಿವಾರ ಬೆಟ್ಟಿ ನೀಡಿ ಮಾತನಾಡಿದ ಅವರು, ರೈತರು ದೇಶಕ್ಕೆ ದುಡಿದು ಅನ್ನ ನೀಡುವ ಮಹತ್ಕಾರ್ಯದಲ್ಲಿ ಇರುವವರು. ಅತಿವೃಷ್ಟಿಯಿಂದ ರೈತರ ಬೆಳೆ ಹಾಳಾಗಿದ್ದು ರೈತರು ಕಂಗಾಲಾಗಿದ್ದಾರೆ. ಅವರ ನೇರವಿಗೆ ಧಾವಿಸಬೇಕಾಗಿದ್ದ ರಾಜ್ಯ ಸರ್ಕಾರ ಕಾಲಹರಣ ಮಾಡುತಿದ್ದು ಕೆಲ ನೊಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತಿದ್ದಾರೆ. ರೈತರು ಯಾವುದೆ ಕಾರಣಕ್ಕು ಎದೆಗುಂದದೆ  ಧೈರ್ಯವಾಗಿ ಇರಬೇಕು. ನಿಮ್ಮ ಬೆನ್ನಲುಬಾಗಿ ಬಿಜೆಪಿ ಸದಾ ಇರುತ್ತದೆ. ಅಮೂಲ್ಯವಾದ ಜೀವ ಕಳೆದುಕೊಳ್ಳಬಾರದು. ರೈತರ ಸಂಕಷ್ಟಕ್ಕೆ ಸ್ಪಂದಿಸುವ ಬಿಜೆಪಿ ಈ ಹಿಂದೆ ಬಿ.ಎಸ್.ಯಡಿಯುರಪ್ಪನವರ ಸರ್ಕಾರದಲ್ಲಿ ಕೇಂದ್ರದಕಡೆ ಬೊಟ್ಟು ಮಾಡದೆ ಯಾವುದೆ ಎನ್ ಡಿ.ಅರ್.ಎಫ್. ನಿಯಮ‌ ನೋಡದೆ  ಬೆಳೆ ಹಾನಿಯಾದ ರೈತರ ಕುಟುಂಬಕ್ಕೆ ಪ್ರತಿ ಹೆಕ್ಟೇರ ಮಳೆ ಆಶ್ರಿತ ಬೆಳೆಗೆ 17800 ರೂಪಾಯಿ ನೀರಾವರಿ ಬೇಳೆಗೆ 23500 ರೂಪಾಯಿ, ಹಾಗೂ ತೊಟಗಾರಿಕೆ ಬೇಳೆಗಳಿಗೆ 28500 ರೂಪಾಯಿ, ಮನೆಗೆ ಮನೆ ನೀರು ನುಗ್ಗಿದರೆ 10ಸಾವಿರ ರೂಪಾಯಿ, ಮಳೆಗೆ ಮನೆ ಹಾನಿಯಾದರೆ 5ಲಕ್ಷ ರೂಪಾಯಿ ಪರಿಹಾರ ನೀಡಿದ್ದೆವು ಕಾಂಗ್ರೆಸ್ ಸರ್ಕಾರ್ ಬಿಡಿಗಾಸು ನೀಡದಿರುವದು ಆತಂಕದಲ್ಲಿರುವ ರೈತರ ಆತ್ಮಸ್ಥರ್ಯ ಕುಗ್ಗಿಸುವ ಕೆಲಸ ಮಾಡುತಿದೆ . ಅಲ್ಲದೆ ಈ ಸರ್ಕಾರ ಬೆಲೆ ಹೆಚ್ಷು ಮಾಡುವದರೊಂದಿಗೆ ರೈತರ, ಕೂಲಿ ಕಾರ್ಮಿಕರ ಹಾಗೂ ಜನಸಾಮಾನ್ಯರ ಮೇಲೆ‌ ಬರೆ  ಹಾಕುತ್ತಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆರಗೆ ಇಳಿಕೆ ಮಾಡುವದರೊಂದಿಗೆ ಜಗತ್ತೆ ಹುಬ್ಬೆರಿಸುವಂತೆ ಮಾಡಿದೆ. ಬಿಜೆಪಿ ಜನಪರ ಸರ್ಕಾರ ಎನ್ನುವದು ಮತ್ತೊಮ್ಮೆ ಸಾಬೀತಾಗಿದೆ.
ಅನಾವೃಷ್ಟಿಯಿಂದಾಗಿ ಬೆಳೆಗಳಿಗೆ ಭಾರೀ ಹಾನಿ ಉಂಟಾದ  ರೈತರೊಂದಿಗೆ ನೇರವಾಗಿ ಮಾತನಾಡಿ, ಹೊಲಗಳಲ್ಲಿ ಬೆಳೆ ನಾಶವಾದ ಸ್ಥಿತಿಯನ್ನು ಪರಿಶೀಲಿಸಿದರು. ಈ ವೇಳೆ ರೈತರು ತಮ್ಮ ತೊಂದರೆಗಳನ್ನು ವಿವರಿಸಿ, ತಕ್ಷಣದ ಪರಿಹಾರ ಧನ ನೀಡುವಂತೆ ಸರ್ಕಾರವನ್ನು ಒತ್ತಾಯಿಸುವಂತೆ ಮನವಿ ಮಾಡಿದರು, ಬೆಳೆ ನಾಶವಾದ ಹಳ್ಳಿಗಳ ರೈತರು ತಮ್ಮ ಜೀವನೋಪಾಯವೇ ತೊಂದರೆಗೊಳಗಾದ್ದರಿಂದ ಸರ್ಕಾರದ ಪ್ರತಿನಿಧಿಗಳು ರೈತರಿಗೆ ಧೈರ್ಯ ನೀಡಿ ತಕ್ಷಣ ನೆರವು ನೀಡುವ ಅತ್ಯಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ. ಗ್ರಾಮೀಣ ಮತಕ್ಷೇತ್ರದ ಮಂಡಲ ಅಧ್ಯಕ್ಷ ಯುವರಾಜ ಜಾಧವ, ಉಮೇಶ ಪೂರಿ, ಲಕ್ಷ್ಮಣ ದೇವರೋಜಿ, ಅಡಿವೇಶ ಅಂಗಡಿ, ಸಿದ್ದಯ್ಯ ಪೂಜಾರ, ಮಲ್ಲಯ್ಯ ಪೂಜಾರ, ಉಪ್ಪಿನ, ಸುಭಾಷ ಚೌಗಲೆ, ರಾಜು ಕನಬುರ್ಗಿ, ಪ್ರಮೋದ ಪಾಟೀಲ, ಭೀಮರಾಂ ಬಡೋಚಿ, ಪರುಶರಾಮ ಕೇದಾರ ಸೇರಿದಂತೆ ಅನೇಕ ರೈತರು ಕಾರ್ಯಕರ್ತರು ಇದ್ದರು.
WhatsApp Group Join Now
Telegram Group Join Now
Share This Article