ಬೃಹತ್ ಗಾತ್ರದ ಹೆಬ್ಬಾವು ಕಬ್ಬಿನ ಗದ್ದೆಯಲ್ಲಿ

Ravi Talawar
 ಬೃಹತ್ ಗಾತ್ರದ ಹೆಬ್ಬಾವು ಕಬ್ಬಿನ ಗದ್ದೆಯಲ್ಲಿ
WhatsApp Group Join Now
Telegram Group Join Now
ಧಾರವಾಡ: ಸುಮಾರು 12 ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವನ್ನು ಉರಗ ರಕ್ಷಕ ಸೋಮಶೇಖರ ಹಾಗೂ ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿ ಅದನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
ಕಲಘಟಗಿ ತಾಲೂಕಿನ ಬಣದೂರು ಗ್ರಾಮದ ರೈತರೊಬ್ಬರ ಕಬ್ಬಿನ ಗದ್ದೆಯಲ್ಲಿ ಈ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿತ್ತು. ಅದನ್ನು ಕಂಡ ರೈತರು ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರು.
ಕೂಡಲೇ ಅರಣ್ಯಾಧಿಕಾರಿಗಳು ಹಾಗೂ ಉರಗ ರಕ್ಷಕ ಸೋಮಶೇಖರ ಅವರೊಂದಿಗೆ ಸ್ಥಳಕ್ಕೆ ತೆರಳಿ ಕಬ್ಬಿನ ಗದ್ದೆಯಲ್ಲಿದ್ದ 12 ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವನ್ನು ರಕ್ಷಿಸಿ, ಅದನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಹೆಬ್ಬಾವು ಸೆರೆಯಾದ ಹಿನ್ನೆಲೆ ಅಲ್ಲಿನ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
WhatsApp Group Join Now
Telegram Group Join Now
Share This Article