ಘಟಪ್ರಭಾ. ಹಿಂದೂ ಧರ್ಮ ಸಂಸ್ಥಾಪಕ ಆದ್ಯ ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಕರ್ನಾಟಕ ಸರ್ಕಾರದ ಮಾರ್ಗಸುಚಿಯಂತೆ ಆಚರಣೆ ಮಾಡಲಾಯಿತು, ಅಧ್ಯಕ್ಷತೆಯನ್ನು ಪುರಸಭೆಯ ಮುಖ್ಯಾಧಿಕಾರಿ ಶ್ರೀಮತಿ ಎಂ ಎಸ್ ಪಾಟೀಲ ಅವರು ವಹಿಸಿದ್ದರು, ಪೂಜೆಯನ್ನು ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ವಿ ಮಹಾಜನ ಅವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಪಟ್ಟಣ ಪಂಚಾಯಿತಿ ಸದಸ್ಯರಾದ ಸಲೀಂ ಕಬ್ಬೂರ, ಸುರೇಶ ಪೋತದಾರ, ಸಿಬಂದಿಗಳಾದ ಚಲವಾದಿ ಆಕ್ಷಯ ಮಾನಗಾವಿ, ರಮೇಶ್ ತಂಗೆವ್ವಗೋಳ, ವಿಠ್ಠಲವಗ್ಗನವರ, ಶ್ರೀಧರ ಪಾಟೀಲ, ರಾಕೇಶ್, ಮುಂತಾದವರು ಭಾಗವಹಿಸಿದ್ದರು.