ಬೈಲಹೊಂಗಲ: ಬಡವರಿಗೆ, ಬಡ ಹೆಣ್ಣು ಮಕ್ಕಳಿಗೆ, ಮಕ್ಕಳಿರದ ತಂದೆ ತಾಯಿಗಳಿಗೆ , ನಿರ್ಗತಿಕರಿಗೆ ಶ್ರೀ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಯೋಜೆನೆ ಮತ್ತು ಧರ್ಮಾಧಿಕಾರಿ ಶ್ರೀ ಡಾ. ಡಿ. ವೀರೇಂದ್ರ ಹೆಗಡೆ ಅವರ ಬಡ ಜನಪರ ಕಾರ್ಯ ಅಪಾರ ಎಂದು ಚಿತ್ರನಟ, ಕಿರುತೆರೆ ಕಲಾವಿದ, ಪ್ರಗತಿಪರ ರೈತರಾದ ಸಿ ಕೆ ಮೆಕ್ಕೇದ ಹೇಳಿದರು.
ಅವರು ತಾಲೂಕಿನ ವಕ್ಕುಂದ ಗ್ರಾಮದಲ್ಲಿ ಗುರುವಾರದಂದು ಮಾಶಾಸನ ಫಲಾನುಭವಿಯಾದ ಶ್ರೀಮತಿ ಕಾಶವ್ವ ಬಸಪ್ಪ ನಾಗನೂರು ಇವರಿಗೆ ಧರ್ಮಸ್ಥಳ ಕ್ಷೇತ್ರದಿಂದ ಮಂಜೂರಾತಿಯಾದ ವಾತ್ಸಲ್ಯ ಕಾರ್ಯಕ್ರಮ ದಡಿಯಲ್ಲಿ ನೀರ್ಗತಿಕರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ನಿರ್ಮಲಾ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ವಿಜಯಲಕ್ಷ್ಮಿ ಅನಿಗೋಳ, ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳಗಾವಿ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ನಾಯ್ಕ, ತಾಲೂಕಾ ಯೋಜನಾಧಿಕಾರಿಗಳಾದ ವಿಜಯ ಕುಮಾರ್ ಎಂ,ಅರ್ಚಕರಾದ ಚೆನ್ನಯ್ಯ ಚಿಕ್ಕಮಠ, ತಾಲೂಕಿನ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶೈಲಾ ಜೆ,ವಲಯದ ಮೇಲ್ವಿಚಾರಕರಾದ ಜಗದೀಶ ಕುಂಬಾರ, ಒಕ್ಕೂಟದ ಅಧ್ಯಕ್ಷರಾದ ಮಲ್ಲವ್ವ ಮತ್ತು ಅನ್ನಪೂರ್ಣ ಇವರ ಸಮ್ಮುಖದಲ್ಲಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಿಲ್ಲಾ ನಿರ್ದೇಶಕರಾದ ಸತೀಶ್ ನಾಯ್ಕ ಮಾತನಾಡಿ ಜ್ಞಾನವಿಕಾಸ ಕಾರ್ಯಕ್ರಮ ರೂಪುರೇಷೆ, ಕಾರ್ಯಕ್ರಮದಡಿಯಲ್ಲಿ ಸಿಗುವಂತ ಸೌಲಭ್ಯಗಳ ಬಗ್ಗೆ, ಬೆಳಗಾವಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 844 ನಿರ್ಗತಿಕರಿಗೆ ಪ್ರತಿ ತಿಂಗಳು ರೂ.1000 ದಿಂದ 1500/- ರೂ.ವೆರೆಗೆ ಮಾಶಾಸನ ನೀಡುತ್ತಿದ್ದು,ಪ್ರಸ್ತುತ ವರ್ಷ ತೀರ ನಿರ್ಗತಿಕರ ಫಲಾನುಭಗಳನ್ನು ಗುರುತಿಸಿ ಮಕ್ಕಳು ಇಲ್ಲದವರು, ದುಡಿಯಲು ಶಕ್ತಿ ಇಲ್ಲದವರು, ಅವರಿಗೆ ಯಾವುದೇ ರೀತಿಯ ಸಹಾಯ ಸಿಗದೆ ಅವರ ಜೀವನಕ್ಕೆ ಆಧಾರಣೆ ಇಲ್ಲದಂತ ಸದಸ್ಯರನ್ನ ಗುರುತಿಸಿ ವಾತ್ಸಲ್ಯ ಕಾರ್ಯಕ್ರಮ ಅಡಿಯಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದು, ಪ್ರಸ್ತುತ ಆರ್ಥಿಕ ವರ್ಷದಲ್ಲಿ 44 ವಾತ್ಸಲ್ಯ ಮನೆ ರಚನೆ ಹಾಗೂ ಮನೆ ರಿಪೇರಿ ಶೌಚಾಲಯ ರಚನೆ ಮಾಡುವ ಮೂಲಕ ಅವರಿಗೆ ಸುಖ ಜೀವನ ನಡೆಸಲು ಸೂರು ಕಟ್ಟಿ ಕೊಡುವ ಮೂಲಕ ಬದುಕಲು ಹುಮ್ಮಸ್ಸು ತುಂಬುವಂತ ಕೆಲಸ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ಮತ್ತು ಇದಲ್ಲದೆ ಸಮುದಾಯ ಅಭಿವೃದ್ಧಿ ವಿಭಾಗದಿಂದ ಹಲವಾರು ದೇವಸ್ಥಾನಗಳಿಗೆ ಶಾಲಾ ಕಟ್ಟಡಗಳಿಗೆ ಅನುದಾನಗಳ ನೀಡುವುದು ಉನ್ನತ ಪದವೀಧರ ಶಿಕ್ಷಣ ಮಾಡುವಂತಹ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಹಾಗೂ ಶಿಕ್ಷಕರ ಕೊರೆತೆ ಇರುವ ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರ ವಿಂಗಡಣೆ ಇನ್ನು ಹತ್ತು ಹಲವಾರು ಕಾರ್ಯಕ್ರಮಗಳನ ನೀಡುವ ಮೂಲಕ ಗ್ರಾಮೀಣ ಪ್ರದೇಶ ಅಭಿವೃದ್ಧಿ ಹೊಂದಲು ಅವಕಾಶ ನೀಡಿರುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದ ನಿರೂಪಣೆ ಜ್ಞಾನವಿಕಾಸ ಸಮನ್ವಯಧಿಕಾರಿ ಶೈಲಾ ಜೆ, ಸ್ವಾಗತ ವಲಯದ ಮೇಲ್ವಿಚಾರಕರಾದ ಜಗದೀಶ ಕುಂಬಾರ ರವರು ನೆರವೇರಿಸಿದರು.ಈ ಸಂದರ್ಭ ಸೇವಾ ಪ್ರತಿನಿಧಿ ಭಾರತಿ ಢವಳೆ,ರೇಣುಕಾ ಜಾವೂರೆ ಸಂಘದ ಸದಸ್ಯರು ಉಪಸ್ಥಿತರಿದ್ದರು.