ತಾಲೂಕಾ ಮಟ್ಟದ  ಕಾಲೇಜ್ ವಿದ್ಯಾರ್ಥಿಗಳ ಸ್ಪರ್ಧೆ

Ravi Talawar
 ತಾಲೂಕಾ ಮಟ್ಟದ  ಕಾಲೇಜ್ ವಿದ್ಯಾರ್ಥಿಗಳ ಸ್ಪರ್ಧೆ
WhatsApp Group Join Now
Telegram Group Join Now
ನೇಸರಗಿ.2025 -26 ನೇ ಸಾಲಿನ ಬೈಲಹೊಂಗಲ ಹಾಗೂ ಚ.ಕಿತ್ತೂರು ತಾಲೂಕ ಮಟ್ಟದ ಪದವಿ ಪೂರ್ವ ಕಾಲೇಜುಗಳ ಸಂಸ್ಕೃತಿಕ ಚಟುವಟಿಗಳ ಸ್ಪರ್ಧೆಗಳು, ಸರಕಾರಿ ಸ್ವತಂತ್ರ ಪದವಿ ಪೂರ್ವ  ಮಹಾವಿದ್ಯಾಲಯ ಗ್ರಾಮದ ಪಿ ಯು ಕಾಲೇಜು ಅವರನದಲ್ಲಿ ಜರುಗಿದವು. ಆರಂಭದಲ್ಲಿ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನವರಿಗೆ ಶ್ರದಾಂಜಲಿ ಸಲ್ಲಿಸುವುದರ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು. ಈ ಸಮಾರಂಭದಲ್ಲಿ ವಿವಿಧ ಕಾಲೇಜು ಗಳಿಂದ ಆಗಮಿಸಿದ ಅನೇಕ ಸ್ಪರ್ಧಾಳುಗಳು ಭಾಗವಹಿಸಿದ್ದರು ಹಾಗೂ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ವೇದಿಕೆಯ  ಮೇಲೆ ಪ್ರಾಂಶುಪಾಲರಾದ ಎಸ್ ವ್ಹಿ  ದೊಡಮನಿ, ಕಾಲೇಜು ಸುಧಾರಣಾ ಸಮಿತಿ  ಉಪಾಧ್ಯಕ್ಷರಾದ, ಶ ಬಸವರಾಜ ಚಿಕ್ಕನಗೌಡ್ರ, ಯುವ ಧುರಿಣರಾದ  ಸಚಿನ್ ಪಾಟೀಲ್, ಹಿರಿಯ ಉಪನ್ಯಾಸಕರಾದ  ಪುರಾಣಿಕಮಠ, ಎಸ್ . ಆರ್. ಕಲಹಾಳ,ಶಿಕ್ಷಕರಾದ  ಸಂತೋಷ ಪಾಟೀಲ  ಹಾಗೂ CBC ಯ ಸದಸ್ಯರು, ಉಪನ್ಯಾಸಕರು, ಉಪಸ್ಥಿತರಿದ್ದರು, ಗಣ್ಯಮಾನ್ಯರು, ಅಥಿತಿಗಳು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.  ರಾಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀಮತಿ ಸಿ ಬಿ  ರೊಟ್ಟಿ  ನಿರೂಪಿಸಿದರೆ, ಕನ್ನಡ ಉಪನ್ಯಾಸಕಾರದ ಡಾ ಎನ್ ಎಸ್  ವಾಲಿಕಾರ  ಎಲ್ಲರನ್ನು ವಂದಿಸಿದರು, ಸಂಜೆ ಸಂಸ್ಕೃತಿಕ ಸ್ಪರ್ಧೆ ಯಲ್ಲಿ ಭಾಗವಹಿಸಿ ವಿಜೇತ ರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.
WhatsApp Group Join Now
Telegram Group Join Now
Share This Article