Contents
ಪರಾಗ್ ಶಾ ಅತ್ಯಂತ ಶ್ರೀಮಂತ ಶಾಸಕ: ಎಡಿಆರ್ ವರದಿಯು ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸುವ ಮೊದಲು ಸಲ್ಲಿಸಿದ ಅಫಿಡವಿಟ್‌ಗಳಲ್ಲಿರುವ ಮಾಹಿತಿಯನ್ನೇ ಇದು ಹೇಳುತ್ತದೆ. ಈ ಸಂಶೋಧನೆಯು 28 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳ 4092 ಶಾಸಕರನ್ನು ಒಳಗೊಂಡಿದೆ. ಈ ವರದಿಯ ಪ್ರಕಾರ, ಬಿಜೆಪಿಯ ಪರಾಗ್ ಶಾ ಅತ್ಯಂತ ಶ್ರೀಮಂತ ಶಾಸಕ. ಪಶ್ಚಿಮ ಬಂಗಾಳದ ನಿರ್ಮಲ್ ಕುಮಾರ್ ಧಾರಾ ಅತಿ ಕಡಿಮೆ ಆಸ್ತಿ ಹೊಂದಿರುವ ಶಾಸಕರಾಗಿದ್ದಾರೆ. ಅವರ ಬಳಿ ಕೇವಲ 1700 ರೂ. ಇದೆ. ರ್ಮಲ್ ಕುಮಾರ್ ಧಾರಾ ಪಶ್ಚಿಮ ಬಂಗಾಳದ ಇಂಡಸ್ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ.ಕರ್ನಾಟಕದ ಶಾಸಕರು ಹೊಂದಿರುವ ಆಸ್ತಿ ಎಷ್ಟಿದೆ?: ಕರ್ನಾಟಕದ ಶಾಸಕರು ಒಟ್ಟಾರೆಯಾಗಿ 14,179 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದು, ಇದು ದೇಶದಲ್ಲೇ ಅತಿ ಹೆಚ್ಚು. ಮಹಾರಾಷ್ಟ್ರ ಶಾಸಕರ ಆಸ್ತಿ 12,424 ಕೋಟಿ ರೂ. ಆಂಧ್ರಪ್ರದೇಶದ ಶಾಸಕರು 11,323 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಅತ್ಯಂತ ಕಡಿಮೆ ಸಂಪತ್ತು ಹೊಂದಿರುವ ರಾಜ್ಯಗಳಲ್ಲಿ ತ್ರಿಪುರ, ಮಣಿಪುರ ಮತ್ತು ಪುದುಚೇರಿ ಸೇರಿವೆ.