ಬೆಳಗಾವಿ. ಡಾ. ಡಿ.ಎಸ್. ಕರ್ಕಿ ಪ್ರತಿಷ್ಠಾನ ಟ್ರಸ್ಟ್ ಪ್ರತಿವರ್ಷ ನೀಡುವ ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ 2025 ನೇ ಸಾಲಿಗೆ ಎರಡು ಕೃತಿಗಳು ಪುರಸ್ಕೃತಗೊಂಡಿದ್ದು, ಡಾ ಸುನೀಲ ಪರೀಟ ಅವರ “ಬಹುದೊಡ್ಡ ಪ್ರಶ್ನೆ” ಕೃತಿಯು ಆಯ್ಕೆಯಾಗಿದ್ದು 2026 ನೇ ಸಾಲಿನಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಇವರಿಗೆ ಪ್ರಶಸ್ತಿ ಪ್ರದಾನವನ್ನು ಮಾಡಲಾಗುವುದು.
“ಬಹುದೊಡ್ಡ ಪ್ರಶ್ನೆ” ಈ ಕೃತಿಯಲ್ಲಿ ಒಟ್ಟು ಐವತ್ತು ಕವಿತೆಗಳಿದ್ದು ಎಲ್ಲ ಕವಿತೆಗಳು ಸಮಕಾಲಿನ ಸಮಾಜಕ್ಕೆ ಹಾಗೂ ಮಾನವ ಜೀವನಕ್ಕೆ ಸಕಾರಾತ್ಮಕ ವಿಚಾರಗಳನ್ನು ತಲುಪಿಸುವ ಪ್ರಯತ್ನ ಮಾಡಿವೆ. ಜೊತೆಗೆ ಶ್ರೀಮತಿ ಜ್ಯೋತಿ ಬದಾಮಿ ಬೆಳಗಾವಿ, ಇವರ “ಋಣಿ” ಕೃತಿಗು ಪ್ರಶಸ್ತಿ ಲಭಿಸಿದೆ. ಹಾಗೂ ಪ್ರಶಸ್ತಿಗೆ ತಮ್ಮ ಕೃತಿಗಳನ್ನು ಕಳುಹಿಸಿ ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಎಲ್ಲ ಕವಿಗಳಿಗೆ ಹಾರ್ದಿಕ ಅಭಿನಂದನೆಗಳನ್ನು ಪ್ರತಿಷ್ಠಾನದ ಅಧ್ಯಕ್ಷರು ಡಾ. ರಮೇಶ್ ಕರ್ಕಿ, ಡಾ ವಿಜಯಲಕ್ಷ್ಮಿ ಪುಟ್ಟಿ ಮತ್ತು ಕಾರ್ಯದರ್ಶಿ ಪ್ರೊ ಗಿರೀಶ್ ಕರ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


