ಜಲ, ನೆಲ, ಮಳೆ, ಕೊಯ್ಲು ಕುರಿತು ರೈತರಿಗೆ ಪಾಠಶಾಲೆ

Ravi Talawar
 ಜಲ, ನೆಲ, ಮಳೆ, ಕೊಯ್ಲು ಕುರಿತು ರೈತರಿಗೆ ಪಾಠಶಾಲೆ
WhatsApp Group Join Now
Telegram Group Join Now
ನೇಸರಗಿ: ಸಮೀಪದ  ವನ್ನೂರ  ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ  ಯೋಜನೆ ವತಿಯಿಂದ  ನೆಲಜಲ ಸಂರಕ್ಷಣೆ / ಮಳೆ ಕೊಯ್ಲು ವಿಷಯದ ಅಡಿಯಲ್ಲಿ ರೈತ ಕ್ಷೇತ್ರ ಪಾಠ ಶಾಲೆಯನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಬಸನಗೌಡ ಪಾಟೀಲ ಮಾತನಾಡಿ ಜಲ ನೆಲ, ಸಂರಕ್ಷಣೆ / ಮಳೆ ಕೊಯ್ಲು ರೈತರಿಗೆ   ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದರು.  ಊರಿನ ಮುಖಂಡರಾದ ಮಲ್ಲಪ್ಪ ಬಾಳಸಾಹೇಬ  ದೇಸಾಯಿ ಅವರು ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಹಾಗೂ ಪಂಚಾಯತ ಸದಸ್ಯರಾದ ಹನುಮಂತ ಅವರು ರೈತರು ಸ್ವಾವಲಂಬಿ ಜೀವನವನ್ನು ನಡೆಸಬೇಕೆಂದು ಎಂದರು. ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರು, ಊರಿನ ಗಣ್ಯರು,ರೈತ ಬಾಂಧವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ತಾಲೂಕಿನ ಕೃಷಿ ಮೇಲ್ವಿಚಾರಕರು ನಿರೂಪಣೆ ಮಾಡಿದರು ಹಾಗೂ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಯವರು ಸ್ವಾಗತಿಸಿದರು.
WhatsApp Group Join Now
Telegram Group Join Now
Share This Article