ಚಿದಾನಂದ ಸವದಿ ಬಡವ ಶ್ರೀಮಂತ ಎಂಬ ಯಾವುದೇ ಭೇದವಿಲ್ಲದೆ ಎಲ್ಲರೊಂದಿಗೆ ಇರುವ ಒಬ್ಬ ನಾಯಕ: ಮಲ್ಲು ಕುಲ್ಲೋಳಿ

Hasiru Kranti
ಚಿದಾನಂದ ಸವದಿ ಬಡವ ಶ್ರೀಮಂತ ಎಂಬ ಯಾವುದೇ ಭೇದವಿಲ್ಲದೆ ಎಲ್ಲರೊಂದಿಗೆ ಇರುವ ಒಬ್ಬ ನಾಯಕ: ಮಲ್ಲು ಕುಲ್ಲೋಳಿ
WhatsApp Group Join Now
Telegram Group Join Now
ಅಥಣಿ: ಯುವ ನಾಯಕ ಚಿದಾನಂದ ಸವದಿ ಅವರ 40 ನೇ ಹುಟ್ಟುಹಬ್ಬದ  ಪ್ರಯುಕ್ತ ಅವರು ಅಭಿಮಾನಿಗಳಾದ ಮಲ್ಲು ಕುಲ್ಲೋಳಿ ಹಾಗೂ ಬಸು ತೇರದಾಳ ಅವರ ಗೆಳೆಯರ ಬಳಗದವರು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ. ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ್ದಾರೆ,
ಯುವ ನಾಯಕ ಚಿದಾನಂದ ಸವದಿ ಅವರಿಗೆ ಆಯುಷ್ಯ ಆರೋಗ್ಯ ಮತ್ತು ರಾಜಕೀಯ ಯಶಸ್ಸು  ಲಭಿಸಲಿ ಎಂದು ಪ್ರಾರ್ಥಿಸಿದರು.
ಈ ವೇಳೆ ಯುವ ನಾಯಕ ಚಿದಾನಂದ ಸವದಿ ಅವರ ಅಪ್ಪಟ ಅಭಿಮಾನಿ ಮಲ್ಲು ಕುಲ್ಲೋಳಿ ಮಾತನಾಡಿ ಚಿದಾನಂದ ಸವದಿ ಅವರು ಸದಾ ಕ್ರಿಯಾಶೀಲರಾಗಿ. ಬಡವ ಶ್ರೀಮಂತ ಎಂಬ ಯಾವುದೇ ಭೇದವಿಲ್ಲದೆ ಎಲ್ಲರೊಂದಿಗೆ ನಾನು ಒಬ್ಬ ಎಂಬಂತೆ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಅವರು ಬಂದು ಹೋದಲ್ಲೆಲ್ಲ ಯುವಕರ ದಂಡೆ ಅವರ ಹಿಂದೆ ಬೀಳುತ್ತದೆ. ಹೀಗಾಗಿ
ಯುವಕರ ಕಣ್ಮಣಿಯಾಗಿದ್ದಾರೆ. ರಾಜಕೀಯದಲ್ಲಿ ಅವರ ತಂದೆ ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಲಕ್ಷ್ಮಣ ಸವದಿ ಅವರ ಗರಡಿಯಲ್ಲಿ ಪಳಗಿ ರಾಜಕೀಯದಲ್ಲಿಯೂ ಕೂಡಾ ತಮ್ಮ ಛಾಪನ್ನು ಮೂಡಿಸಿದ್ದಾರೆ. ಕರೋನಾ ಸಂದರ್ಭದಲ್ಲಿ ಜೀವದ ಹಂಗನ್ನು ತೊರೆದು ತಂದೆ ಆಜ್ಞೆಯನ್ನು ಕ್ಷೇತ್ರದ ತುಂಬೆಲ್ಲ ಸಂಚರಿಸಿ ತಮ್ಮ ಅಭಿಮಾನಿ ಬಳಗದರೊಂದಿಗೆ ಸೇರಿ ಆಹಾರ ಧಾನ್ಯಗಳ ಕಿಟ್ಟನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಪಾಲ್ಗೊಂಡು ತಾಲೂಕಿನಾದ್ಯಂತ ತಮ್ಮದೇ ಆದ ವರ್ಚಸ್ಸನ್ನು ಮೂಡಿಸಿದ್ದಾರೆ. ಇಂತಹ ಯುವ ನಾಯಕ ಚಿದಾನಂದ ಸವದಿ ಅವರ ಹುಟ್ಟುಹಬ್ಬಕ್ಕೆ ಹಣ್ಣು ಹಂಪಲು ವಿತರಿಸಿ ಸರಳವಾಗಿ ಆಚರಿಸುತ್ತಿರುವುದು ನಮಗೆ ಹೆಮ್ಮೆ ಎನಿಸುತ್ತದೆ. ಎಂದು ಹೇಳಿದರು
ಈ ವೇಳೆ ಮಲ್ಲು ಕುಲ್ಲೋಳಿ. ಬಸು ತೇರದಾಳ. ರವಿ ಬಾಸಿಂಗಿ. ಮಂಜು ನೂಲಿ. ಶ್ರೀನಿವಾಸ ಪಟ್ಟಣ.  ಪ್ರಶಾಂತ ಪಾಟೀಲ. ಅಪ್ಪು ಕೂಕಟನೂರ. ಮುತ್ತು ಮೊಕಾಶಿ. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article