ಧಾರವಾಡ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಗರಗ ಗ್ರಾಮದ ಶ್ರೀ ಮಡಿವಾಳೇಶ್ವರ ಕಲ್ಮಠದ ಉತ್ತರಾಧಿಕಾರಿ ಪರಮಪೂಜ್ಯ ಆತ್ಮಾರಾಮ ಮಹಾಸ್ವಾಮಿಜಿ ಸಾನಿಧ್ಯ ಹಾಗೂ ಮಾಜಿ ಶಾಸಕ ಅಮೃತ ದೇಸಾಯಿಯವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಉಳವಿ ಚನ್ನಬಸವೇಶ್ವರ ದೇವಸ್ಥಾನದವರೆಗೆ ಹಮ್ಮಿಕೊಂಡಿರುವ 9ನೇ ವರ್ಷದ ಪಾದಯಾತ್ರೆ ಆರಂಭವಾಯಿತು
ಗರಗ ಗ್ರಾಮದ ಶ್ರೀ ಮಠದಲ್ಲಿ ಮಡಿವಾಳೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸಿ, ನಂತರ ವಿವಿಧ ಮಠಾಧೀಶರ ಸತ್ಕರಿಸಿ, ಆಶೀರ್ವಾದ ಪಡೆಯಲಾಯಿತು. ಶ್ರೀಮಠದ ಉತ್ತರಾಧಿಕಾರಿ ಆತ್ಮಾರಾಮ ಮಹಾಸ್ವಾಮೀಜಿ ಸೇರಿದಂತೆ ಅನೇಕ ಸ್ವಾಮೀಜಿಗಳು ಪಾದಯಾತ್ರೆಗೆ ಚಾಲನೆ ನೀಡಿದರು.
ಮಾಜಿ ಶಾಸಕ ಎ.ಬಿ.ದೇಸಾಯಿ, ಶ್ರೀಮಠದ ಕಾರ್ಯಾಧ್ಯಕ್ಷ ಅಶೋಕ ದೇಸಾಯಿ ಮತ್ತು ಮಾಜಿ ಶಾಸಕ ಅಮೃತ ದೇಸಾಯಿ, ಅವರ ಪತ್ನಿ ಪ್ರಿಯಾ ದೇಸಾಯಿ , ಶ್ರೀಮಠದ ಟ್ರಸ್ಟ್ ಕಮೀಟಿಯ ಪದಾಧಿಕಾರಿಗಳು, ಸದಸ್ಯರು ಈ ಸಂದರ್ಭದಲ್ಲಿದ್ದರು.ಪಾದಯಾತ್ರೆ ಯಲ್ಲಿಮುಖಂಡರಾದ ಶಂಕರ ಮುಗದ, ನಿಜನಗೌಡ ಪಾಟೀಲ, ಮಹೇಶ ಯಲಿಗಾರ ಸೇರಿದಂತೆತಾಲೂಕಿನ ಹಂಗರಕಿ, ತಡಕೋಡ, ಯಾದವಾಡ, ಹೆಬ್ಬಳ್ಳಿ, ನರೇಂದ್ರ, ಉಪ್ಪಿನಬೆಟಗೇರಿ ಸೇರಿದಂತೆ ವಿವಿಧ ಗ್ರಾಮದ ನೂರಾರು ಭಕ್ತರು ಭಾಗವಹಿಸಿದ್ದರು.
ಪಾದಯಾತ್ರೆಯೂ, ಮಂಗಳಗಟ್ಟಿ, ನರೇಂದ್ರ ಧಾರವಾಡ ತಪೋವನ, ನಿಗದಿ, ಹಳಿಯಾಳ, ದಾಂಡೇಲಿ ಮೂಲಕ ನ.30 ರಂದು ಶ್ರೀಕ್ಷೇತ್ರ ಉಳವಿ ತಲುಪಲಿದೆ.


