ಕಲ್ಲೋಳಿಯ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘಕ್ಕೆ ರೂ.೪.೮೨ ಕೋಟಿ ಲಾಭ

Pratibha Boi
ಕಲ್ಲೋಳಿಯ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘಕ್ಕೆ ರೂ.೪.೮೨ ಕೋಟಿ ಲಾಭ
Oplus_16908288
WhatsApp Group Join Now
Telegram Group Join Now

ಮೂಡಲಗಿ: ‘ತಾಲ್ಲೂಕಿನ ಕಲ್ಲೋಳಿಯ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘವು ೨೦೨೫-೨೬ನೇ ಹಣಕಾಸಿನ ವ?ದ ಕೊನೆಯಲ್ಲಿ ರೂ.೪.೮೨ ಕೊಟಿ ಲಾಭ ಗಳಿಸಿ ಪ್ರಗತಿಯಲ್ಲಿ ಸಾಗಿದೆ’ ಎಂದು ಸಂಘದ ಅಧ್ಯಕ್ಷ ಬಾಳಪ್ಪ ಬಸಪ್ಪ ಬೆಳಕೂಡ ಅವರು ತಿಳಿಸಿದರು.
ಸಂಘದ ಕಾರ್ಯಾಲಯದಲ್ಲಿ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಸೌಹಾರ್ದ ಸಹಕಾರಿ ಕಾನೂನು ಅಡಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ, ಶಾಖೆಗಳ ರಹಿತವಾಗಿ ಲಾಭಾಂಶದಲ್ಲಿ ದಾಖಲೆ ಹೊಂದಿರುವ ಸಂಘ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು
ಸದ್ಯ ಸಂಘವು ರೂ.೭೮.೮೩ ಲಕ್ಷ ಶೇರು ಬಂಡವಾಳ, ರೂ.೨೭ ಕೋಟಿ ನಿಧಿಗಳು, ರೂ.೯೯.೧೭ ಕೋಟಿ ಠೇವುಗಳು, ರೂ.೨೪.೬೨ ಕೋಟಿ ಗುಂತಾವಣಿಗಳನ್ನು ಹೊಂದಿದೆ. ವಿವಿಧ ಕ್ಷೇತ್ರಗಳಿಗೆ ರೂ.೧೦೧.೦೫ ಕೋಟಿ ಸಾಲ ನೀಡಿದೆ, ರೂ.೧೨೭ ಕೋಟಿ ದುಡಿಯುವ ಬಂಡವಾಳ ಮತ್ತು ರೂ.೩೩೨ ಕೋಟಿ ಒಟ್ಟು ವ್ಯವಹಾರ ಮಾಡಿದೆ ಎಂದರು.
ಸಂಘವು ೩೫ ವಸಂತಗಳನ್ನು ಪೂರೈಸಿದ್ದು ಪ್ರತಿ ವ?ವೂ ಶೇ.೧೦೦ರ? ಸಾಲ ವಸೂಲಾತಿ ದಾಖಲೆ ಹೊಂದಿದೆ ಹಾಗೂ ಲೆಕ್ಕಪರಿಶೋಧನೆಯಲ್ಲಿ ‘ಅ’ ಶ್ರೇಣಿಯ ಶ್ರೇಯಸ್ಸು ಹೊಂದಿದೆ. ಕಳೆದ ೨೬ ವ?ಗಳಿಂದ ಪ್ರತಿ ವ?ವೂ ಶೇ.೨೫ರ? ಲಾಭಾಂಶ ವಿತರಿಸಿ ಗ್ರಾಹಕರ ವಿಶ್ವಾಸ ಹೊಂದಿದೆ. ಮರಣ ಹೊಂದಿದ ಸದಸ್ಯರ ಕುಟುಂಬಕ್ಕೆ ರೂ.೧೦,೦೦೦ ಹಣ ಮರಣೋತ್ತರ ನಿಧಿ ನೀಡಲಾಗುತ್ತಿದೆ. ಸದಸ್ಯರ ಮಕ್ಕಳು ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಎರಡೂ ವಿಭಾಗದಲ್ಲಿ ತಲಾ ಮೂವರು ವಿದ್ಯಾರ್ಥಿಗಳಿಗೆ ಒಟ್ಟು ರೂ.೧.೨೦ ಲಕ್ಷ ಪ್ರೋತ್ಸಾಹ ಹಣವನ್ನು ಹಂಚಲಾಗುತ್ತಿದೆ ಎಂದರು.
ಸಂಘವು ಗ್ರಾಹಕರಿಗೆ ಆರ್‌ಟಿಜಿಎಸ್, ಎನ್‌ಇಎಫ್‌ಟಿ, ಐಎಂಪಿಎಸ್, ಇ-ಸ್ಟಾಂಪ್, ಸೇಪ್ ಲಾಕರ್, ಮಿನಿ ಎಟಿಎಂ ಸೌಲಭ್ಯ ಕಲ್ಪಿಸಿದೆ, ತ್ವರಿತ ಸೇವೆಗೆ ಗಣಕೀಕರಣ, ಎಸಿ ವ್ಯವಸ್ಥೆ ಹೊಂದಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಶಿವರುದ್ರ ಬಿ.ಪಾಟೀಲ, ನಿರ್ದೇಶಕರಾದ ಬಸಗೌಡ ಪಾಟೀಲ, ಬಸವಣ್ಣೆಪ್ಪ ಗೋರೋಶಿ, ಮಲ್ಲಪ್ಪ ಖಾನಾಪೂರ, ರಾಮಪ್ಪ ಗದಾಡಿ, ಹಣಮಂತ ಪರಕನಟ್ಟಿ, ಸುಭಾ? ಖಾನಾಪೂರ, ಬಸಪ್ಪ ಹೆಬ್ಬಾಳ, ಪ್ರಕಾಶ ಕಲಾಲ, ಮಹಮ್ಮದಶಫಿ ಮೋಕಾಶಿ, ಕಲ್ಲೋಳೆಪ್ಪ ತೆಗಳಗಡೆ, ಹಿರಿಯರಾದ ಭೀಮಪ್ಪ ಕಡಾಡಿ, ಬಾಳಣ್ಣ ಕಂಕಣವಾಡಿ, ಪ್ರಧಾನ ವ್ಯವಸ್ಥಾಪಕ ಹಣಮಂತ ಖಾನಗೌಡ್ರ, ಈರಯ್ಯ ಕರಗಾಂವಿಮಠ, ರಮೇಶ ಕವಟಕೊಪ್ಪ, ರಾಮಣ್ಣ ಹೆಬ್ಬಾಳ, ವಿನೋದ ಕುರಬೇಟ ಇದ್ದರು.

 

WhatsApp Group Join Now
Telegram Group Join Now
Share This Article