ಹುಕ್ಕೇರಿ. ತಾಲೂಕಿನ ಹಿಡಕಲ್ ಜಲಾಶಯದ ಪರಿಸರದ ಕನಾಟಕ ವಿದ್ಯುತ್ ನಿಗಮದ ಘಟಪ್ರಭಾ ವಿದ್ಯುದಾಗರ ಆವರಣದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ರವರ ಪುತ್ಥಳಿ ಅನಾವರಣ ಕಾರ್ಯಕ್ರಮ ಜರುಗಿತು.
ಮೋಕ್ಷಗೊಂಡ ವಿಶ್ವೇಶ್ವರಯ್ಯರವರ ಜನ್ಮ ದಿನ ಅಂಗವಾಗಿ 58 ನೇ ಇಂಜಿನಿಯರ್ಸ್ ದಿನ ಆಚರಣೆ ಹಿನ್ನಲೆಯಲ್ಲಿ ಪ್ರಥಮವಾಗಿ ಸರ್ ಎಂ ವಿಶ್ವೇಶ್ವರಯ್ಯ ರವರ ಪುತ್ಥಳಿ ಅನಾವರಣ ಮಾಡುವ ಮೂಲಕ ಅರ್ಥಪೂರ್ಣವಾಗಿ ಜರುಗಿದ ಕಾರ್ಯಕ್ರಮದಲ್ಲಿ ಕಾಳಿ ಪ್ರೊಜೆಕ್ಟ್ ಚಾಲನೆ ಮತ್ತು ಪಾಲನೆ ಮುಖ್ಯ ಅಭಿಯಂತರ ಶ್ರೀಧರ ಕೋರಿ ಮತ್ತು ಕಾಮಗಾರಿ ಮುಖ್ಯ ಅಭಿಯಂತರ ಎಂ ರಾಜಶೇಖರ ಪುತ್ಥಳಿ ಅನಾವರಣ ಗೋಳಿಸಿದರು.
ನಂತರ ಮಾದ್ಯಮಗಳೊಂದಿಗೆಮಾತನಾಡಿದ ಶ್ರೀಧರ ಕೋರಿ ಘಟಪ್ರಭಾ ಯೋಜನಾ ಪ್ರದೇಶದಲ್ಲಿ ಬಹುದಿನಗಳಿಂದ ವಿಶ್ವೇಶ್ವರಯ್ಯ ರವರ ಪುತ್ಥಳಿ ಅನುಷ್ಠಾನಕ್ಕೆ ಬೇಡಿಕೆ ಇದ್ದರಿಂದ ನಮ್ಮ ವ್ಯವಸ್ಥಾಪಕ ಮಂಡಳಿ ಸಹಕಾರ ಮತ್ತು ಅಭಿಯಂತರ ಡಿ ಬಸವರಾಜ ರವರ ಪರಿಶ್ರಮದಿಂದ ಸರ್ ಎಂ ವಿಶ್ವೇಶ್ವರಯ್ಯ ರವರ ಜನ್ಮ ದಿನದಂದು ಪುತ್ಥಳಿ ಅನಾವರಗೊಂಡಿದ್ದು ನಮ್ಮಲ್ಲಿರಿಗೂ ಸಂತೋಷ ತಂದಿದೆ ಎಂದರು.
ನಂತರ ವಿಭಾಗಗಳ ಅಭಿಯಂರತರು ಕ ಪಿ ಸಿ ಎಲ್ ಸಿಬ್ಬಂದಿಗಳು ನೂತನ ಪುತ್ಥಳಿಗೆ ನಮನ ಸಲ್ಲಿಸಿದರು.
ಕಾಳ ೮ ಪ್ರಾಜೆಕ್ಟ್ ಕಾಮಗಾರಿ ವಿಭಾಗದ ಮುಖ್ಯ ಅಭಿಯಂತರ ಎಂ ರಾಜಶೇಖರ ಮಾತನಾಡಿ ನಮ್ಮ ಆಡಳಿತ ಮಂಡಳಿ ಹಣಕಾಸಿನ ನೇರವು ನೀಡಿ ಅಲ್ಪ ಸಮಯದಲ್ಲಿಯೇ ಅಭಿಯಂತರ ಡಿ ಬಸವರಾಜು ರವರು ಅತ್ಯುತ್ತಮವಾದ ಪುತ್ಥಳಿ ಅನಾವರಣ ಕಾರ್ಯಕ್ರಮ ಆಯೋಜನೆ ಮಾಡಿದ್ದರಿಂದ ನಮಗೆ ತುಂಬಾ ಖುಷಿಯಾಗಿದೆ , ಎಲ್ಲರಿಗೂ ಅಭಿಯಂತರರ ದಿನಾಚಾರಣೆಯ ಶುಭಾಶುಗಳು ಎಂದರು.
ನಂತರ ಜಿ ಡಿ ಪಿ ಎಚ್ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ಡಿ ಇವರ ಅದ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮುಖ್ಯ ಅಥಿತಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ವೇದಿಕೆ ಮೇಲೆ ಸೂಪಾ ಮತ್ತು ಕದ್ರಾ ಅಭಿಯಂತರರಾದ ಕೃಷ್ಣ ಭಟ್ಟ ಕೆ ಎಂ, ಅಶೋಕ ಕುಮಾರ ಎಚ, ಶಂಕರ ಲಮಾಣಿ, ಚಂದ್ರಶೇಖರ ದೊರೆ, ಶಂಕರ ಕಲಗಾರೆ ಉಪಸ್ಥಿತರಿದ್ದರು.
ಜಿಡಿಪಿಎಚ್ ಅಭಿಯಂತರ ಡಿ ಬಸವರಾಜು ಮಾತನಾಡಿ ಕರ್ನಾಟಕದ ನಮ್ಮ ಯೋಜನಾ ಪ್ರದೇಶಗಳಲ್ಲಿ ಸರ್ ಎಂ ವಿಶ್ವೇಶ್ವರಯ್ಯ ರವರ ಮೂರ್ತಿ ಪ್ರತಿಷ್ಟಾಪಿಸಲಾಗಿದೆ ಆದರೆ ಹಿಡಕಲ್ ವಿದ್ಯುದಾಗರ ದಲ್ಲಿ ಪ್ರಥಮ ಬಾರಿಗೆ ನಮ್ಮ ಆಡಳಿತ ಮಂಡಳಿ ಮತ್ತು ಮುಖ್ಯ ಅಭಿಯಂತರರ ಮಾರ್ಗದರ್ಶನದಲ್ಲಿ ಹಾಗೂ ಎಂ ವಿಶ್ವೇಶ್ವರಯ್ಯ ರವರ ಜನ್ಮ ದಿನದಂದು ಅನಾವರಣ ಗೋಂಡಿದ್ದು ನಮ್ಮೆಲ್ಲರ ಸುದಿನ ವಾಗಿದೆ ಎಂದರು.
ಈ ಸಂದರ್ಭದಲ್ಲಿ ಕೆ ಪಿ ಸಿ ಎಂಪ್ಲಾಯೀಸ್ ಯೂನಿಯನ್ ಪದಾಧಿಕಾರಿಗಳಾದ ಸರಸಯ್ಯ ದೇವಯ್ಯ, ವೈ ತಿರುಪತಿರಾವ, ಸಂತೋಷ ಭಟ್, ಸುಷ್ಮಾ ಸಿ ಪಿ ಮೊದಲಾದವರು ಉಪಸ್ಥಿತರಿದ್ದರು.