ಕರುಣಾ ಅಮೃಸ್ಕರ್ ಗೆ ಪಿಎಚ್‌ಡಿ  ಪದವಿ 

Hasiru Kranti
 ಕರುಣಾ ಅಮೃಸ್ಕರ್ ಗೆ ಪಿಎಚ್‌ಡಿ  ಪದವಿ 
WhatsApp Group Join Now
Telegram Group Join Now

ಬೆಳಗಾವಿ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಕರುಣಾ ಅಮೃಸ್ಕರ್ ಅವರು ಸಲ್ಲಿಸಿದ “ಎ ಸ್ಟಡಿ ಆನ್ ರೋಲ್ ಆಫ್ ಹೆಲ್ತ್ ಆ್ಯಂಡ್ ವಲ್‌ನೆಸ್ ಕ್ಲಬ್ ಆನ್ ಪ್ರಮೋಟಿಂಗ್ ಹೆಲ್ತ್ & ಸೆಲೆಕ್ಟಡ್ ಸೈಕೋಲಾಜಿಕಲ್ ವೇರಿಯಬಲ್ಸ್ ಅಮೊಂಗ್ ಅರ್ಬನ್ ವುಮನ್” ಎಂಬ ಮಹಾ ಪ್ರಬಂಧಕ್ಕೆ  ಪಿಎಚ್‌ಡಿ ಪದವಿಯನ್ನು ನೀಡಿದೆ.  ಕರುಣಾ ಅಮ್ರುಸ್ಕರ್ ಅವರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಪ್ರೊ. ರಾಜ್‌ಕುಮಾರ್ ಪಿ. ಮಾಲಿಪಾಟೀಲ್ ಅವರ  ಮಾರ್ಗದರ್ಶನದಲ್ಲಿ ತಮ್ಮ ಸಂಶೋಧನೆಯನ್ನು ನಡೆಸಿದರು.

ಪ್ರಸ್ತುತ ಕರುಣಾ ಅಮೃಸ್ಕರ್ ಅವರು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರನ್ನು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಜಯ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಎಸ್. ಸೋಮನಾಳ್ ಮತ್ತು ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಎಲ್. ಲಕ್ಕನವರ್, ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ . ಎಸ್. ಸಿ. ಪಾಟೀಲ್ ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿ ಅಭಿನಂದಿಸಿದರು.

WhatsApp Group Join Now
Telegram Group Join Now
Share This Article