ಬೆಳಗಾವಿ. ಕಳೆದ 8 ದಿನಗಳಿಂದ ನಿರಂತರವಾಗಿ ರಾಜ್ಯ ರೈತ ಸಂಘ, ಹಸಿರು ಸೇನೆ, ಕಬ್ಬು ಬೆಳೆಗಾರರ ಸಂಘಟಿತ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದು ಗುರುವಾರ ನಡೆದ ಸಂಪುಟ ಸಭೆಯಲ್ಲಿ ರಾಜ್ಯದ ಮುಖ್ಯ ಮಂತ್ರಿ ಸಿದ್ರಾಮಯ್ಯ ಅವರು ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತ ನಾಯಕರೊಂದಿಗೆ ಸರಣಿ ಸಭೆ ನಡೆಸಿ ಪ್ರತಿ ಟನ ಕಬ್ಬಿಗೆ ರೂ. 3300/- ಘೋಷಣೆ ಮಾಡಿರುವದು ರಾಜ್ಯದ ರೈತ ಸಂಘದ ರಾತ್ರಿ, ಹಗಲು ನಿರಂತರ ಹೋರಾಟ, ರೈತರ ನಿರಂತರ ಧರನಿಗೆ ಮತ್ತು ರಾಜ್ಯದ ಬಿಜೆಪಿ ಅಧ್ಯಕ್ಷ ಬಿ ವಾಯ ವಿಜಯೇಂದ್ರ ಅವರು ಹೋರಾಟಕ್ಕೆ ಬೆಂಬಲ ನೀಡಿದ್ದು ಇಂದು ರೈತರಿಗೆ ತಕ್ಕ ಮಟ್ಟಿನ ಜಯವಾಗಿದೆ ಎಂದು ಬೆಳಗಾವಿ ಜಿಲ್ಲಾ ಮಹಾನಗರ ಬಿಜೆಪಿ ಉಪಾಧ್ಯಕ್ಷರಾದ ಮಹಾಂತೇಶ ವಕ್ಕುಂದ ಹೇಳಿದರು.


