ಐಪಿಎಲ್‌ ಪಂದ್ಯಗಳ ಟಿಕೆಟ್‌ಗಳನ್ನ ಬ್ಲ್ಯಾಕ್‌ನಲ್ಲಿ ಮಾರಾಟ

Ravi Talawar
 ಐಪಿಎಲ್‌ ಪಂದ್ಯಗಳ ಟಿಕೆಟ್‌ಗಳನ್ನ ಬ್ಲ್ಯಾಕ್‌ನಲ್ಲಿ ಮಾರಾಟ
WhatsApp Group Join Now
Telegram Group Join Now

ಬೆಂಗಳೂರು : ಐಪಿಎಲ್‌ ಪಂದ್ಯಗಳ ಟಿಕೆಟ್‌ಗಳನ್ನ ಬ್ಲ್ಯಾಕ್‌ನಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಳ್ಳಂದೂರಿನ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದ ವಂಶಿ (23) ಬಂಧಿತ ಆರೋಪಿ. ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗೆ, ಒಳ್ಳೆಯ ಸಂಬಳವಿತ್ತು. ಆದರೆ, ಕಾಳಸಂತೆಯಲ್ಲಿ ಐಪಿಎಲ್‌ ಪಂದ್ಯಗಳ ಟಿಕೆಟ್ ಖರೀದಿಸುತ್ತಿದ್ದ ಆರೋಪಿ, ಅದನ್ನ ದುಪ್ಪಟ್ಟು ಬೆಲೆಗಿಂತಲೂ ಅಧಿಕ ಬೆಲೆಗೆ ಬ್ಲ್ಯಾಕ್‌ನಲ್ಲಿಯೇ ಮಾರಾಟ ಮಾಡುತ್ತಿದ್ದ. ಮೇ 17ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) V/s ಕೋಲ್ಕತ್ತ ನೈಟ್‌ ರೈಡರ್ಸ್ (ಕೆಕೆಆರ್) ನಡುವಿನ ಪಂದ್ಯದ ಟಿಕೆಟ್‌ಗಳನ್ನ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯ ಬಳಿ ಖರೀದಿದಾರರ ಸೋಗಿನಲ್ಲಿ ತೆರಳಿದ್ದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ವಂಶಿ ಎಂಬಾತನಿಂದ ಹತ್ತಕ್ಕೂ ಹೆಚ್ಚು ಟಿಕೆಟ್‌ಗಳನ್ನ ವಶಪಡಿಸಿಕೊಳ್ಳಲಾಗಿದ್ದು, ಬೆಳ್ಳಂದೂರು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

WhatsApp Group Join Now
Telegram Group Join Now
Share This Article