ಪಾರ್ವತಿ ನಗರ ಶಾಖೆಯ, ಐಡಿಬಿಐ ಬ್ಯಾಂಕಿನ ಕಡೆಯಿಂದ ಶಾಸ್ತ್ರಿ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದೇಣಿಗೆ.
ಬಳ್ಳಾರಿ03.. 36ನೇ ವಾರ್ಡಿನ ಲಾಲ್ ಬಹದ್ದೂರ್ ಶಾಸ್ತ್ರಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇಂದು ಪಾರ್ವತಿ ನಗರದ ಐಡಿಬಿಐ ಶಾಖೆಯ ಕಡೆಯಿಂದ ಐರನ್ ಲಾಕರ್, ಮೂರು ಗ್ರೀನ್ ಬೋರ್ಡ್ ಗಳ ಸೆಟ್,ಆರು ಟೇಬಲ್ ಗಳನ್ನು ಏಣಿಗೆಯಾಗಿ ಕೊಟ್ಟು ಘನತೆಯನ್ನು ಮೆರೆದಿದ್ದಾರೆ.
ಈ ಕಾರ್ಯಕ್ಕಾಗಿ ನಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಜೆ ವಿ ಮಂಜುನಾಥ್, ಮುಖ್ಯೋಪಾಧ್ಯಾಯರು ಸೇರಿದಂತೆ ಶಿಕ್ಷಕರ ವೃಂದ ಪಾರ್ವತಿ ನಗರದ ಐಡಿಬಿಐ ಬ್ಯಾಂಕ್ ನ ಸೇಲ್ಸ್ ಮ್ಯಾನೇಜರ್ ಅರುಣ್ ಕುಮಾರ್ ಸರ್ ಮತ್ತು ರೀಜನಲ್ ಮ್ಯಾನೇಜರ್ ಕರಿಬಸಪ್ಪ ಸರ್ ಅವರಿಗೆ ಸನ್ಮಾನಿಸಿ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದರು.