ಧಾರಾಲಿ, ಆಗಸ್ಟ್ 08: ಉತ್ತರಾಖಂಡದಲ್ಲಿ ಮೇಘಸ್ಫೋಟ ಸಂಭವಿಸಿದೆ. 35 ವರ್ಷಗಳ ಬಳಿಕ ಒಟ್ಟಿಗೆ ಸೇರಿದ್ದ 24 ಮಂದಿ ಕಾಲೇಜು ಸ್ನೇಹಿತರು ನಾಪತ್ತೆಯಾಗಿದ್ದಾರೆ. ಪುಣೆಯಲ್ಲಿ 1990ರಲ್ಲಿ ಒಟ್ಟಿಗೆ ಕಾಲೇಜು ವ್ಯಾಸಂಗ ಮಾಡಿದ್ದರು. ಈ ಎಲ್ಲಾ ಸ್ನೇಹಿತರು ಮಹಾರಾಷ್ಟ್ರದ 75 ಪ್ರವಾಸಿಗರ ಗುಂಪಿನ ಭಾಗವಾಗಿದ್ದರು. ಬುಧವಾರ ಗಂಗೋತ್ರಿ ಬಳಿಯ ಧಾರಾಲಿ ಗ್ರಾಮದಲ್ಲಿ ಪ್ರವಾಹ ಉಂಟಾದಾಗಿನಿಂದ 24 ಸ್ನೇಹಿತರ ಗುಂಪು ಕಾಣೆಯಾಗಿದೆ . ಇದಲ್ಲದೆ, ಮಹಾರಾಷ್ಟ್ರದ ಇತರ 74 ಪ್ರವಾಸಿಗರು ಉತ್ತರಾಖಂಡದಲ್ಲಿ ಸಿಲುಕಿಕೊಂಡಿದ್ದಾರೆ.
ಉತ್ತರಾಖಂಡದಲ್ಲಿ ಮೇಘಸ್ಫೋಟ; 24 ಮಂದಿ ಕಾಲೇಜು ಸ್ನೇಹಿತರು ನಾಪತ್ತೆ

ಪುಣೆಯ ಮಂಚಾರ್ನ ಅವಸರಿ ಖುರ್ದ್ ಗ್ರಾಮದ ಅಶೋಕ್ ಭೋರ್ ಮತ್ತು ಅವರ 23 ಸ್ನೇಹಿತರು 35 ವರ್ಷಗಳ ನಂತರ ಚಾರ್ ಧಾಮ್ ಯಾತ್ರೆಗೆ ಒಟ್ಟುಗೂಡಿದ್ದರು. ಮುಂಬೈ ಮತ್ತು ಇತರ ಸ್ಥಳಗಳಲ್ಲಿ ವಾಸಿಸುವ ಈ ಗುಂಪಿನಲ್ಲಿರುವ ಜನರು ಆಗಸ್ಟ್ 1 ರಂದು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಅಶೋಕ್ ಭೋರ್ ಅವರ ಮಗ ಆದಿತ್ಯ ಅವರು ಆಗಸ್ಟ್ 4 ರಂದು ತಮ್ಮ ತಂದೆಯೊಂದಿಗೆ ಕೊನೆಯ ಬಾರಿಗೆ ಮಾತನಾಡಿದ್ದರು ಎಂದು ಹೇಳಿದ್ದಾರೆ.