ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಸೆಳೆದಿರುವ ‘ನಾನು ಮತ್ತು ಗುಂಡ-2’ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ರಘುಹಾಸನ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ.
ಈ ಹಿಂದೆ ತೆರೆ ಕಂಡಿದ್ದ
‘ನಾನು ಮತ್ತು ಗುಂಡ’ ಚಿತ್ರದ ಶಂಕರ ನಿಧನದ ಮೇಲೆ ಆತನ ಮಗನಿಂದ ಕಥೆ
‘ನಾನು ಮತ್ತು ಗುಂಡ ಭಾಗ-2’ ಕಂಟಿನ್ಯೂ ಆಗುತ್ತದೆ. ನಟ ರಾಕೇಶ್ ಅಡಿಗ ಮಗನಾಗಿ ನಟಿಸಿದ್ದು, ಆತನಿಗೆ ನಾಯಿಯೇ ಪ್ರಪಂಚ. ಸೋಷಿಯಲ್ ಕನ್‌ಸರ್ನ್ ಜೊತೆಗೆ ಡಿವೈನ್ ಕಂಟೆಂಟ್ ಕೂಡ ಚಿತ್ರದಲ್ಲಿದೆ.
ರಚನಾ ಇಂದರ್ ನಾಯಕಿಯಾಗ ನಟಿಸಿದ್ದಾರೆ. ಸಿಂಬು ಜೊತೆ ಬಂಟಿ ಎಂಬ ನಾಯಿಯ ಜತೆ ಬಾಲನಟ ಜೀವನ್ ಮುಂತಾದವರು ಆರ್. ಪಿ. ಪಟ್ನಾಯಕ್ ಅವರ ಸಂಗೀತ ಸಂಯೋಜನೆ, ರುತ್ವಿಕ್ ಮುರಳೀಧರ್ ಹಿನ್ನೆಲೆ ಸಂಗೀತ, ತನ್ವಿಕ್ ಛಾಯಾಗ್ರಹಣ. ಚಿತ್ರದ ಸಂಭಾಷಣೆ ಹಾಗೂ ಸಾಹಿತ್ಯವನ್ನು ರೋಹಿತ್ ರಮನ್ ರಚಿಸಿದ್ದಾರೆ.