ನೇಸರಗಿ:ಬೈಲಹೊಂಗಲದ ಶ್ರೀ ಖಾಸ್ಗತ್ತೇಶ್ವರ ಶಿಕ್ಷಣ ಸಂಸ್ಥೆಯ ಆಕ್ಸಫರ್ಡ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾದ ನೇಸರಗಿ ಗ್ರಾಮದ ಸಿದ್ಧೇಶ.ಸುರೇಶ.ನಾವಲಗಟ್ಟಿ ಆಂಗ್ಲ ಮಾಧ್ಯಮದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ 619/625 ಅಂಕಗಳನ್ನು ಪಡೆದು ಪ್ರತಿಶತ 99.04% ಮಾಡಿ ಶಾಲೆಗೆ ಪ್ರಥಮ ಬರುವುದರ ಜೊತೆಗೆ,ತಾಲೂಕಿಗೆ 6ನೇ ಸ್ಥಾನ ಪಡೆದಿದ್ದಾನೆ. ಅವನ ಈ ಸಾಧನೆಗೆ ಶಾಲಾ ಅಧ್ಯಕ್ಷರಾದ ಕಾಶೀನಾಥ ಬಿರಾದಾರ, ಕಾರ್ಯನಿರ್ವಾಹಕ ಆಡಳಿತಧಿಕಾರಿಗಳಾದ ಯೋಗೀಶ್ ಬಿರಾದಾರ, ಆಡಳಿತ ಮಂಡಳಿ,ಗುರುವೃಂದ ಮೆಚ್ಚುಗೆ ಜೊತೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.ಅವನ ಈ ಸಾಧನೆಗೆ ವಿದ್ಯಾಮಂದಿರ ಪ್ರೌಢಶಾಲೆಯ ನಿವೃತ್ತ ಗುರುಗಳು ಹಾಗೂ ಅವನ ಅಜ್ಜನವರಾದ ಸಿ ವ್ಹಿ ಕಟ್ಟೀಮನಿ ಮತ್ತು ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದಾರೆ.ಅವನ ಈ ಸಾಧನೆಗೆ ತಂದೆ ಕೆ ಎಸ್ ಆರ್ ಟಿ ಸಿ ನಿರ್ವಾಹಕ ಸುರೇಶ ನಾವಲಗಟ್ಟಿ,ತಾಯಿ ಕಾಲೇಜು ಉಪನ್ಯಾಸಕಿ ಉಷಾ ನಾವಲಗಟ್ಟಿ ಅಕ್ಕಂದಿರಾದ ಸುವರ್ಣ, ಚೈತ್ರಾ ಅತೀವ ಹರ್ಷ ವ್ಯಕ್ತಪಡಿಸಿದ್ದಾರೆ.1989-90ನೇ ಸಾಲಿನ ವಿದ್ಯಾಮಂದಿರ ಪ್ರೌಢಶಾಲೆಯ ಬಳಗದ ವತಿಯಿಂದ ಆತ್ಮೀಯರಾದ ಸಂಜಯ ಸರಾಫ, ಸುನೀಲ ಕೊಳದೂರ ಹಾಗೂ ಮಹಾಂತೇಶ ಚರಂತಿಮಠ ಸಿದ್ಧೇಶನನ್ನು ಸತ್ಕರಿಸಿದರು.ಅದೇ ರೀತಿ ಹಲವಾರು ಸಂಘ ಸಂಸ್ಥೆಗಳ ಮುಖಂಡರರು ಬೈಲಹೊಂಗಲದಂತಹ ತಾಲೂಕಾ ಸ್ಥಾನದಲ್ಲಿ ನೇಸರಗಿಯ ಹೆಸರು ಬರಲು ಸಿದ್ಧೇಶನ ಸಾಧನೆ ಕಾರಣವೆಂದು ತಿಳಿಸಿ ಶುಭ ಹಾರೈಸಿದರು.