ಅಲ್ಲಂ ಸುಮಂಗಳಮ್ಮ ಕಾಲೇಜಿನಲ್ಲಿ“ಸೈಬರ್ ಭದ್ರತೆ ಮತ್ತು ಜಾಗೃತಿ ಕಾರ್ಯಕ್ರಮ”

Ravi Talawar
  ಅಲ್ಲಂ ಸುಮಂಗಳಮ್ಮ ಕಾಲೇಜಿನಲ್ಲಿ“ಸೈಬರ್ ಭದ್ರತೆ ಮತ್ತು ಜಾಗೃತಿ ಕಾರ್ಯಕ್ರಮ”
WhatsApp Group Join Now
Telegram Group Join Now
ಬಳ್ಳಾರಿ ಅ 17.  ವೀರಶೈವ ವಿದ್ಯಾವರ್ಧಕ ಸಂಘದ ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ , ಬಳ್ಳಾರಿ ಇಲ್ಲಿನ ಕಂಪ್ಯೂಟರ್ ಅಪ್ಲಿಕೇಶನ್ ಪದವಿ (BCA) ವಿಭಾಗವು ಕಾಲೇಜಿನ ವಿಚಾರ ಸಂಕಿರಣದ ಸಭಾಂಗಣದಲ್ಲಿ ಎರಡು ದಿನಗಳ “ಸೈಬರ್ ಭದ್ರತೆ ಮತ್ತು ಜಾಗೃತಿ ಕಾರ್ಯಕ್ರಮ”ವನ್ನು ಆಯೋಜಿಸಲಾಗಿತ್ತು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಎಂ. ಮರಿದೇವಯ್ಯ, ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ಸಂತೋಷ್ ಚೌಹಾಣ್ (ಕೆ.ಎ.ಎಸ್)., ಡಿ. ವೈ.ಎಸ್. ಪಿ(ಸೈಬರ್ ಕ್ರೈಂ ವಿಭಾಗ) ಬಳ್ಳಾರಿ, ಅವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ದೂಪಂ ಸತೀಶ್ ಅವರು, IQAC ಸಂಯೋಜಕರಾದ ಡಾ. ಸಯೀದಾ ತನ್ವೀರ್ ಅವರು, ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ವಿಜಯೇಂದ್ರ ರಂಗ ಪ್ರಸಾದ್ ಮತ್ತು BCA ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಶೇಖ್ ಯಾಸ್ಮೀನ್ ಅವರು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾದ ಡಿ.ವೈ.ಎಸ್.ಪಿ ಡಾ. ಸಂತೋಷ್ ಚೌಹಾಣ್ ಅವರು ಸೈಬರ್ ಅಪರಾಧದ ವಿವಿಧ ರೂಪಗಳು ಹಾಗೂ ಅದರ ಅಪಾಯಗಳ ಬಗ್ಗೆ ತಮ್ಮ ಆಳವಾದ ಜ್ಞಾನವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಮೊಬೈಲ್‌ಗಳನ್ನು ಬಳಸುವಾಗ ಎಚ್ಚರಿಕೆಯಿಂದ ಇರಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಸೈಬರ್ ಕ್ರೈಂ ಅನ್ನು ತಡೆಯಲು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುರಕ್ಷಿತವಾಗಿರುವ ಕೆಲವು ವಿಧಾನಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ ಸೈಬರ್ ಜಾಗೃತಿ ಕುರಿತ ವಿತರಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ದೂಪಂ ಸತೀಶ್ ಅವರು ಬಳ್ಳಾರಿ ಜಿಲ್ಲಾ ಪೊಲೀಸ್ ಸೈಬರ್ ಕ್ರೈಂ ವಿಭಾಗವು ವಿದ್ಯಾರ್ಥಿಗಳಿಗೆ ಸೈಬರ್ ಭದ್ರತೆ ಕುರಿತು ಶಿಕ್ಷಣ ನೀಡಿದಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದರು. ಸೈಬರ್ ಕ್ರೈಂ ಇಲಾಖೆ ನೀಡಿದ ಮಾರ್ಗಸೂಚಿಗಳನ್ನು ವಿಧ್ಯಾರ್ಥಿಗಳು ಅನುಸರಿಸಬೇಕು ಎಂದು ಸಲಹೆ ನೀಡಿದರು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಎಂ. ಮರಿದೇವಯ್ಯ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ BCA ವಿಭಾಗವು ಸೈಬರ್ ಜಾಗೃತಿ ಮತ್ತು ಭದ್ರತೆ ಕುರಿತು ಚಿಂತನೀಯ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು. ವಿದ್ಯಾರ್ಥಿಗಳು ಸೈಬರ್ ಅಪರಾಧಗಳ ಬಗ್ಗೆ ಸದಾ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
BCA ಅಂತಿಮ ವರ್ಷದ ವಿದ್ಯಾರ್ಥಿನಿ ಕು. ಜೈಬಾ ವಾಲಿಯ ಕಾರ್ಯಕ್ರಮವನ್ನು ನಿರ್ವಹಿಸಿದರು. ಕು. ಮಹಿತಾ ಅತಿಥಿಗಳನ್ನು ಮತ್ತು ಸಭಿಕರನ್ನು ಸ್ವಾಗತಿಸಿದರು. BCA ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಶೇಕ್ ಯಾಸ್ಮೀನ್ ಮುಖ್ಯ ಅತಿಥಿ ಗಳನ್ನು ಪರಿಚಯಿಸಿದರು. BCA ಮೊದಲ ಸೆಮಿಸ್ಟರನ ಕು. ಬಿಂದು ದೇಸಾಯಿ ಕಾರ್ಯಕ್ರಮವನ್ನು ಪ್ರಾರ್ಥನೆಯಿಂದ ಪ್ರಾರಂಭಿಸಿದರು ಮತ್ತು BCA ವಿಭಾಗದ ಉಪನ್ಯಾಸಕರಾದ
ಕು. ದೀಕ್ಷಿತಾ ವಂದಿಸಿದರು.
BCA ವಿಭಾಗದ ಉಪನ್ಯಾಸಕರಾದ ಕು. ಸಿಂಚನಾ, ಕು.ಅನ್ನಪೂರ್ಣ ಮತ್ತು BCA ವಿಭಾಗದ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article