ಧಾರವಾಡ: ಧಾರವಾಡ ಜಿಲ್ಲಾಧಿಕಾರಿ ವಿದ್ಯಪ್ರಭು ಅವರ ಸೂಚನೆ ಮೇರೆಗೆ ಆಹಾರ ಸುರಕ್ಷತಾ ಮತ್ತು ಔಷಧಿ ಆಡಳಿತ ಇಲಾಖೆ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಇವರ ಜಂಟಿ ಕಾರ್ಯಾಚರಣೆಯಲ್ಲಿ ಧಾರವಾಡ ನಗರದ ಸಪ್ತಾಪುರ, ದುರ್ಗಾ ಕಾಲೋನಿ, ಜಯನಗರ ಕ್ರಾಸ್ ದಲ್ಲಿ ಬರುವ ಎಗ್ ರೈಸ್ ಅಂಗಡಿಗಳು ಪಿಜಿ ಗಳಿಗೆ ಭೇಟಿ ನೀಡಿ ಆಹಾರ ಪದಾರ್ಥ, ಸ್ವಚ್ಛತೆ ಪರಿಶೀಲಿಸಲಾಯಿತು. ಈ ವೇಳೆ ಆಹಾರ ಪದಾರ್ಥಗಳಿಗೆ ಬಳಸಲಾಗುವ ಕೃತಕ ಬಣ್ಣಗಳನ್ನು ಜಪ್ತಿ ಮಾಡಿದರು. ಈ ಕಾರಾಚರಣೆಯಲ್ಲಿ ಅಲ್ತಾಫ್ ಅಹ್ಮದ್, ಪ್ರಕಾಶ್ ಮಲ್ಲಾಪುರ, ಜಾವೀದ್ ರಾಯಬಾಗ್, ಹನಮಂತ,ಪ್ರಕಾಶ್, ಹಾಗೂ ಹು -ಧಾ ಮಹಾನಗರ ಪಾಲಿಕೆ ನಿರೀಕ್ಷಕರಾದ ಹಿನಾ ಕುರ್ಹಟ್ಟಿ,ಭದ್ರಾಗೌಡ, ವಿಕ್ರಮ್, ಹನುಮಂತ್ ಗಡ್ಡಿ, ಜಮಾದಾರ್ -ಪವನ ಸಗ್ಬಾಲ್, ನಾಗರಾಜ್ ಕಟ್ಟಿಮನಿ, ಸುಧಾಕರ್ ಮಾದರ್, ಹಾಜರಿದ್ದರು.